A beautiful Kannada Film released on 24th Aug 2018
Nominated as “Best Children based Film” by Times Kannada Film Award 2018.
WRITTEN AND DIRECTED BY: – Rishab Shetty
PRODUCTION: – Rishab Shetty Films
DOP: – Venkatesh Anguraj
MUSIC: – Vasuki Vaibhav
EDITOR: – Pradeep Rao, Pratheek Shetty
DIALOGUES: – Abhijit Mahesh, Raj B Shetty
Starring: Anant Nag, Rishab SHetty, Vasuku Vaibhav, Ramesh Bhat, Pramod Shetty, Prakash Tuminad, Ranjan, Sampath, Saptha
Photo Orbit Media Rating : 3.5 * / 5
SYNOPSIS
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಈ ಚಿತ್ರದ ಕುರಿತು ನನ್ನದೊಂದು ವಿಮರ್ಶೆ
ನನ್ನ ಮಟ್ಟಿಗೆ ಇದು ಸಿನಿಮಾ ಅನ್ನೋ ಒಂದು ಗಾಡಿಯನ್ನು ದಾಟಿ ಬೆಳೆದಿದೆ ..ಕಾಸರಗೋಡಿನ ಒಂದು ಶಾಲೆ ಅಲ್ಲಿ ನಿಮ್ಮ ಮನೆಯ ತುoಟ ಹುಡುಗನಿದ್ದಾನೆ , ದಡ್ಡನಿದ್ದಾನೆ , ಜಾಣೆಯಿದ್ದಾಳೆ ,ಪ್ರತಿಭಾವಂತರಿದ್ದಾರೆ ,ಜಾತಿ ಮತ ಧರ್ಮ ಎನ್ನುವ ಎಲ್ಲಾ ಎಲೆಗಳನ್ನು ಮೀರಿ ಮಕ್ಕಳು ಸುಂದರವಾಗಿ ಬೆಳೆಯುತಿದ್ದಾರೆ….
ಮಕ್ಕಳಿಗಾಗಿ ಕಣ್ಣೀರಿಡುವ ಮುಕ್ಯೋಪಾದ್ಯಾಯರಿದ್ದಾರೆ , ಸಂಬಳ ಬರದೇ ಇದ್ದರೂ ಕೆಲಸ ಮಾಡುವ ಶಿಕ್ಷಕರಿದ್ದಾರೆ…….
” ಕಾಸರಗೋಡನ್ನೇ ಉಳಿಸಿಕೊಳ್ಳೋಕೆ ಹಾಗಲಿಲ್ಲ ಇನ್ನು ಕನ್ನಡ ಶಾಲೆ ಹೇಗೆ ಉಳಿಸ್ಕೊಳೋದು ” ಇಂಥ ಸನ್ನಿವೇಶದಲ್ಲಿ ಮೈಸೂರಿನಿಂದ ಬರುವ ಅನಂತಪದ್ಮನಾಭ ಪಿ ಬಂದು ಮಕ್ಕಳ ಪಾಲಿನ ಸೂಪರ್ ಮ್ಯಾನ್ ಆಗುತ್ತಾನೆ ಇದು ನೀವು ಟ್ರೈಲರ್ ನೋಡಿದ್ರೇನೇ ಗೊತ್ತಾಗುತ್ತೆ …ಆದ್ರೆ ಅದಕ್ಕೂ ಮೀರಿ ಈ ಚಿತ್ರದಲ್ಲಿ ಇನ್ನು ಇದೆ ಇದರ ರಸದೌತಣವನ್ನು ನೀವು ಸವಿಯಲೇ ಬೇಕು ..”ರಿಷಭ್ ಶೆಟ್ಟಿ ತಮ್ಮ ಸಾಮರ್ಥ್ಯ ಏನು ಅಂತ ಈ ಅದ್ಬುತ ಚಿತ್ರಸೌಧದಿಂದ ತಿಳಿಸಿ ಕೊಟ್ಟಿದ್ದಾರೆ” …”ಅದರಲ್ಲೂ ಆ ೧೫ ನಿಮಿಷದ ಸಿಂಗಲ್ ಟೇಕ್ ಕೋರ್ಟ್ ಸನ್ನಿವೇಶ ಅನಂತ್ ನಾಗ್ ಅವರು ಎಂಥಾ ಕಲಾವಿದ ಎಂದು ಸಾಬೀತುಪಡಿಸುತ್ತಾರೆ’… ‘ವೆಂಕಟೇಶ್ ಅಂಗುರಾಜ್’ಅವರ ಛಾಯಾಗ್ರಹಣ ಕಾಸರಗೋಡಿನ ಪ್ರಕೃತಿ ಸೌಂದರ್ಯವನ್ನು ತಮ್ಮ ಕೈಚಳಕದಿಂದ ಅನಾವರಣಗೊಳಿಸಿದ್ದಾರೆ ….:ವಾಸುಕಿ ವೈಭವ್’ ಸಂಗೀತ ಲೋಕಕ್ಕೆ ಕರೆದೊಯ್ಯುತ್ತದೆ ‘ಅಭಿಜಿತ್’ ಅವರ ಸಂಭಾಷಣೆ ಸ್ಮರಣೀಯ … ಇಷ್ಟು ಬರೀತಾ ಇದ್ದೀನಿ ಅಂದ್ರೆ ಇದು ನನ್ನ ಎಷ್ಟು ಮೋಡಿ ಮಾಡಿದೆ ಅಂತ ಊಹಿಸಿಕೊಳ್ಳಿ …’ಭಾಷೆಯ ಗಡಿ ಸಮಸ್ಯೆಯ ಬಗ್ಗೆ ಸಿನಿಮಾ ಬಂದಿರುವುದು ತೀರಾ ವಿರಳ’…ಅಂತ ಪ್ರಯತ್ನದಲ್ಲಿ ನಿರ್ದೇಶಕರು ಗೆದ್ದಿದ್ದಾರೆ …
ಕೊನೆಯದಾಗಿ ಈ ವಿಷಯ ಹೇಳಲೇಬೇಕು …”ಕ್ಲೈಮಾಕ್ಸ್ ಇಡೀ ಚಿತ್ರಮಂದಿರ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಾ ಪ್ರಶಂಸೆ ಮಾಡಿದ್ದು ಇದೆ ಮೊದಲು ನಾನು ಕಂಡಿದ್ದು ಬಹುಷಃ ಇದೆ ಮೊದಲು ಇರಬಹುದು “…
ರಿಷಬ್ ಸರ್ ತುಂಬಾ ಮೋಡಿ ಮಾಡಿದಿರಿ ಶುಭವಾಗಲಿ ತುಂಬು ಹೃದಯದ ಧನ್ಯವಾದಗಳು ಇಂತ ಒಳ್ಳೆ ಸಿನಿಮಾ ಕೊಟ್ಟಿದ್ದಕ್ಕೆ …..
ಇಂತ ಒಳ್ಳೆ ಸಿನಿಮಾ ನೋಡಿ ಗೆಲ್ಲಿಸದೆ ಇದ್ದರೆ ಕಾಸರಗೋಡನ್ನು ಕೇರಳಕ್ಕೆ ಬಿಟ್ಟು ಕೊಟ್ಟಷ್ಟೇ ಅಪರಾಧ ….ನೋಡಿ ಸಿನಿಮಾ ಗೆಲ್ಲಿಸಿ
ನಿಮ್ಮ
ಪೃಥ್ವಿ ಕುಣಿಗಲ್ …
Leave a Reply