Legend Director – Upcoming Kannada Film
LEGEND DIRECTOR – Kannada Upcoming Film
Banner : NAVILUGARI CINEMA’S
PRODUCER : NAVEEN P B ( NATIONAL RECORD HOLDER)
CO – PRODUCER : VISHALA SATISH
ಮಲ್ಟಿ ಸ್ಟಾರ್ ಚಲನಚಿತ್ರ “ಲೆಜೆಂಡ್ ಡೈರೆಕ್ಟರ್” ಡಬ್ಬಿಂಗ್ ನಲ್ಲಿ – ನವಿಲುಗರಿ ನವೀನ್ ಪಿ. ಬಿ.
ವಿಭಿನ್ನ ಪ್ರಯೋಗಾತ್ಮಕ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ರವರು. ಇಷ್ಟು ದಿನ ಇವರು ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಲೆಜೆಂಡ್ ಡೈರೆಕ್ಟರ್ ಸಿನಿಮಾ ಮೂಲಕ ನಿರ್ದೇಶನದ ಜೊತೆಗೆ ಮೊದಲ ಬಾರಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ.
ಲೆಜೆಂಡ್ ಡೈರೆಕ್ಟರ್ ಸಿನಿಮಾವು ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ನವಿಲುಗರಿ ನವೀನ್ ಪಿ ಬಿ ಕಥೆ, ಚಿತ್ರ-ಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜೊತೆಗೆ ನಾಯಕ ನಟರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀಮತಿ ವಿಶಾಲ ಸತೀಶ್ ರವರು ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಡಬ್ಬಿಂಗ್ ಕಾರ್ಯ ಸವಿ ಸ್ಟುಡಿಯೋ ದಲ್ಲಿ ನಡೆಯುತ್ತಿದ್ದು, ಲೆಜೆಂಡ್ ಡೈರೆಕ್ಟರ್ ಸಿನಿಮಾದಲ್ಲಿ ಬಹಳ ದೊಡ್ಡ ತಾರಾ ಬಳಗವಿದೆ.
ಗೌರವಾನ್ವಿತ ಪಾತ್ರದಲ್ಲಿ ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದರಾಜು, ಸನತ್, ರಾಜ್ ಮನೀಷ್, ಸೆಂಚುರಿ ಡೈರೆಕ್ಟರ್ ಓಂ ಸಾಯಿ ಪ್ರಕಾಶ್ – ಉದ್ಭವ ಕೋಡ್ಲು ರಾಮಕೃಷ್ಣ – ಸೂಪರ್ ಸ್ಟಾರ್ ರಜನಿ ಕಾಂತ್ ಗೆಳೆಯ ರಾಜ್ ಬಹದ್ದೂರ್ – ತಮಿಳು ಹಿರಿಯ ನಟ ಸತ್ಯಜಿತ್ – ಪುಟ್ಟಣ್ಣ ಕಣಗಾಲ್ ತಮ್ಮ ರಮಣ ಕಣಗಾಲ್ – ಪ್ರವೀಣ್ ಕೃಪಾಕರನ್ – ಶಶಿಧರ್ ಕೋಟೆ – ಶಿವಕುಮಾರ್ ಆರಾಧ್ಯ – ಬಹುಭಾಷಾ ನಟ ಸಂದೀಪ್ ಮಲಾನಿ- ಬೆಳ್ಳುಳ್ಳಿ ಕಬಾಬ್ ಚಂದ್ರಣ್ಣ – ಅನಿಲ್ ಕುಮಾರ್ (ಬಾಬ್ಬಿ) – ಆಂಟೋನಿ ಕಮಲ್ – ನಮೋ ರಜತ್ ಗುರೂಜಿ – ಇಂದು ಸಂಜೆ ಡಾ. ಜಿ. ವೈ. ಪದ್ಮ ನಾಗರಾಜು – ಪ್ರೊ ಸಮತಾ ದೇಶಮಾನೆ – ಪ್ರವೀಣಾ ಕುಲಕರ್ಣಿ – ಮಧುಶ್ರೀ ಹೆಚ್. ಆರ್. – ರೀತ್ಯಾ ರಾಘವೇಂದ್ರ – ಹರಿಣಿ ನಟರಾಜ್ – ಪೂಜಾ ರಾಯಸಂ – ಚರಿಕ ಬಿ. ಎಂ – ಗೌರಮ್ಮ (ಕೆಂಚಮ್ಮ) – ರವೀಂದ್ರ ಕುಲಕರ್ಣಿ – ಡಾ. ಅಪ್ಪಾಜಿ ಗೌಡ – ಪ್ರಜ್ವಲ್ ಕೆ. ಆರ್ – ಮಣಿಕಂಠ – ಆರ್. ಟಿ. ಓ. ದೇವರಾಜು – ಎಂ. ಶಿವಣ್ಣ – ಎಸ್. ಶಂಕರ – ಎಸ್. ಯಶುರಾಜ್ – ಸುಶನ್ ಎಸ್ ಶೆಟ್ಟಿ – ಲಲೀಷ್ ಇನ್ನೂ ಅನೇಕರು ನಟಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ : –
ಡಿ ಓ ಪಿ & ಸಂಕಲನ : ಗೌತಮ್ ಗೌಡ,
ಸಂಗೀತ ನಿರ್ದೇಶಕ : ಪ್ರಣವ್ ಸತೀಶ್,
ಸಾಹಿತ್ಯ : ಭುವನ್, ಆಕಾಶ್ ಎಸ್, ಪೃಥ್ವಿರಾಜ್ ಸಂಕಿ.
ಗಾಯಕರು : ಆರ್ ಎಸ್ ಗಣೇಶ್ ನಾರಾಯಣ್ , ಪೋಲಿಸ್ ಸುಬ್ರಹ್ಮಣ್ಯ (ಜೀ ಕನ್ನಡ – ಸ ರಿ ಗ ಮ ಪ ), ನೀತು ಸುಬ್ರಹ್ಮಣ್ಯಂ (ಕನ್ನಡ ಕೋಗಿಲೆ), ದಿವ್ಯ ಕುಪ್ಪುಸ್ವಾಮಿ.
ಮಿಕ್ಸಿಂಗ್ ಮಾಸ್ಟರಿಂಗ್ : ನವೀನ್ ಕುಮಾರ್ ಬಿ ಆರ್ ( ಕೆ ಜಿ ಎಫ್ )
ಅಸೋಸಿಯೇಟ್ ಡೈರೆಕ್ಟರ್ : ಎ ಜಿ ಆರ್ (ಶಿವಾಜಿ)
ಸಹಾಯಕ ನಿರ್ದೇಶಕ : ಲಲಿತ್ ಕೃಷ್ಣ ರಾಜ್ ಬಹದ್ದೂರ್
ನೃತ್ಯ ನಿರ್ದೇಶನ : ಎ ಜಿ ಆರ್ (ಶಿವಾಜಿ), ಸತೀಶ್ ಶೆಟ್ಟಿ
ಲೆಜೆಂಡ್ ಡೈರೆಕ್ಟರ್ ಸಿನಿಮಾದ ಕೆಲಸಗಳು ಚುರುಕಾಗಿ ನಡೆಯುತ್ತಿದ್ದು ಇದೇ ವರ್ಷ ತೆರೆಮೇಲೆ ಬರಲಿದೆ. ಈ ಮಲ್ಟಿ ಸ್ಟಾರ್ ಸಿನಿಮಾ ಮತ್ತೆ ಸಿನಿಮಾ ಅಭಿಮಾನಿಗಳನ್ನು ಚಿತ್ರ ಮಂದಿರದ ಕಡೆ ಮುಖ ಮಾಡುವ ಹಾಗೆ ಮಾಡುತ್ತದೆ ಎಂದು ಲೆಜೆಂಡ್ ಡೈರೆಕ್ಟರ್ ಸಿನಿಮಾ ತಂಡ ತಿಳಿಸಿದೆ.
Leave a Reply