Kannada Short Film “Appa” – Dedicated to all Fathers.
Kannada Short Film ‘Appa’
Artists : NAVEENDRA , SANDEEP MALANI (father ), MONICA mangalore (mother ), SIDDARAMAPPA AYDNAL ( land owner ), VINAY NAGESH RAO (police ), NAVEEN (child artist ), LAKSHMIKANTH ( constable )
Director : M CHANDRAMOULI
DoP: THANVIK G
Editor : SHASHANK MURALIDHARAN
Music : SACHIN BASRUR
PRODUCERS : RAM KESHAV , FARMAN , RAM GOWDA
Direction team : SANDEEP EMMANUEL , SANJU U S, NIHAL GOWDA (sai), NAVEEN RIKKI , SONI ACHARYA , KESHAV
MAKEUP ; NIHAL GOWDA (sai)
Dubbing : BALAJI STUDIO
Soubd Enginner : BORE GOWDA
Dubbing artist : KAVYA PRAKASH
LOCATION SPONSOR : NAVEEN KUMAR ( srigiripura )
SandeepAppa : Father’s Day Special
Review by Lokesh Shankar Narayan
Appa (Short Kannada Film)Directed by : Chandra Mouli
Ratings: Father is always a Star.
ಅಪ್ಪ:
ಅಪ್ಪನದಿನದಂದು ಅಪ್ಪನ ಬಗ್ಗೆ ಅಪರೂಪದ ಕಿರುಚಿತ್ರವೊಂದು ಬಿಡುಗಡೆಯಾಗಿದೆ. ಸತ್ತ ಅಪ್ಪನ ಸುತ್ತ ಸುತ್ತುವ ಈ ಚಿತ್ರವು ನಾಲ್ಕು ನಿಮಿಷಗಳಲ್ಲಿ ನಾಲ್ಕು ದಶಕಗಳಷ್ಟು ವಿಸ್ತಾರದಷ್ಟಿರುವ ಅಪ್ಪನ ಬಯೋಡಾಟಾವನ್ನು, ಅಪ್ಪನನ್ನು ಬಯ್ಯೋ ಮಗನ ಮುಂದೆ ಅಮ್ಮ ಅನಾವರಣ ಮಾಡುವುದೇ ಕಥಾವಸ್ತು.
ಅಪ್ಪನ ಹೆಣದುದುರು ನಿಂತು ತನಗಾಗಿ ಏನೂ ಹಣ ಮಾಡಿಟ್ಟಿಲ್ಲ ಎಂದು ದೂರುವ ಮಗನಿಗೆ ತಂದೆಯ ತ್ಯಾಗದ ಗುಣದ ಬಗ್ಗೆ ಒಂದೊಂದಾಗಿ ಹೇಳುವಾಗ, ತಂದೆಯ ವ್ಯಕ್ತಿತ್ವದೆದುರು ಮಗ ಕುಬ್ಕನಾಗಿ ಪಶ್ಚಾತ್ತಾಪ ಪಡುತ್ತಾನೆ. ಅಪ್ಪ ತನಗಾಗಿ ಆಸ್ತಿ ಮಾಡಿಲ್ಲ ಎಂದು ಹಣದಿಂದ ಅಳೆಯುತ್ತಾ ಹೀಗಳೆಯುವ ಮಗ, ಮಗನೇ ತನ್ನ ಆಸ್ತಿ ಎಂದು ಹೆಮ್ಮೆಯಿಂದ ಹೇಳಿಕೊಂಡು ಈಗ ಹೆಣವಾಗಿ ಮಲಗಿರುವ ಅಪ್ಪ, ಹೆಣದೆದುರು ರೋಧಿಸಿ, ನಂತರ ಮಗನಿಗೆ ಬೋಧಿಸಿ, ಅವನ ದೃಷ್ಠಿಕೋನವನ್ನು ಬದಲಿಸುವ ಅಮ್ಮ ಈ ಚಿತ್ರದ ಮುಖ್ಯ ಪಾತ್ರಗಳು.
ಅಮ್ಮನ ಪ್ರೀತಿ ನೀರಿನಂತೆ, ಅಪ್ಪನ ಪ್ರೀತಿ ಗಾಳಿಯಂತೆ ಎಂಬಂತಹ ಆಪ್ತವೆನಿಸುವ ಸಂಭಾಷಣೆಗಳಿರುವ ಈ ಚಿತ್ರದ ನಿರ್ದೇಶಕರು ಚಂದ್ರಮೌಳಿ. ಒಂದು ರೀತಿಯಲ್ಲಿ ಸಂಭಾಷಣೆಯೇ ಈ ಚಿತ್ರದ ಜೀವ ಅನ್ನಬಹುದು. ಹಾಗೆಯೇ ಜೀವ ಕಳೆದುಕೊಂಡ ಅಪ್ಪನ ಪಾತ್ರದಲ್ಲಿ ಫ್ಲ್ಯಾಷ್ ಬ್ಯಾಕ್ ಮೂಲಕ ಜೀವಂತಿಕೆ ತುಂಬಿದ ನಟನೆ ಸಂದೀಪ್ ಮಲಾನಿಯವರದು. ಮೋನಿಕಾ, ನವೀಂದರ್ ಅಭಿನಯವೂ ನೈಜ್ಯವಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತವೂ ಚಿತ್ರದ ಪರಿಣಾಮವನ್ನು ಹೆಚ್ಚಿಸುವಲ್ಲಿ ತನ್ನ ಕೊಡುಗೆಯನ್ನು ನೀಡಿದೆ.
ಎಲ್ಲರಿಗೂ ಗೊತ್ತಿರುವ ಟಿಪಿಕಲ್ ಅಪ್ಪನನ್ನು, ಅವನ ಚಿಕ್ಕ ಚಿಕ್ಕ ತ್ಯಾಗಗಳನ್ನು ಹಿಗ್ಗಿಸಿ, ಕಿರುಚಿತ್ರದಲ್ಲಿ ಕುಗ್ಗಿಸಿ ದೃಶ್ಯರೂಪಕವಾಗಿ ಪ್ರಚುರ ಪಡಿಸುವ ಮೂಲಕ ಜಗತ್ತಿನ ಎಲ್ಲ ಅಪ್ಪಂದಿರಿಗೂ ಒಂದು ಗೌರವಪೂರ್ಣ ಅಭಿವಂದನೆ ಸಲ್ಲಿಸಿದಂತಾಗಿದೆ.
Leave a Reply