Dr. Premraj K K’s famous Novel “When Shehnai Sounds ” in Kannada Language Releasing soon. Its Malayalam Version already released. Its Kannada Translation done by K Prabhakaran, Shimoga.
ಶೆಹನಾಯ್ ಮೊಳಗುವಾಗ… ಕಾದಂಬರಿ ಶೀಘ್ರದಲ್ಲೇ ಬಿಡುಗಡೆ…
ನನಗೆ ಇತ್ತೀಚೆಗಷ್ಟೆ ಪರಿಚಯವಾದ ಡಾ. ಪ್ರೇಮ್ ರಾಜ್ ಒಬ್ಬ ಕ್ರಿಯಾಶೀಲ ಯುವ ಲೇಖಕ.. ಇವರದ್ದು ಬಹುಮುಖ ಪ್ರತಿಭೆ.. ಬರಹದಲ್ಲೂ ತೊಡಗಿಕೊಂಡಿರುವ ಇವರು, ವೃತ್ತಿಯಲ್ಲಿ ಫ್ರಿಲಾನ್ಸ್ ಮಾರ್ಕೆಟಿಂಗ್ ಕನ್ಸಲ್ಟೆಂಟ್, ಗ್ರಾಫಿಕ್ಸ್ ಡಿಸೈನರ್, ಫಿಲ್ಮ್ ಮೇಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅನೇಕ ಕಥಾಸಂಕಲಗಳನ್ನು, ಕಾದಂಬರಿಯನ್ನು ರಚಿಸಿ, ಮಲಯಾಳಂ ಓದುಗರ, ವಿಶೇಷವಾಗಿ ಬೆಂಗಳೂರಿನ ಮಲಯಾಳಂ ಓದುಗರ ಗಮನ ಸೆಳೆದಿದ್ದಾರೆ..
ಅವರ ಇತ್ತೀಚಿನ ಶೆಹನಾಯ್ ಮುಳ಼ಂಙÄಬೋಳ್.. (ಶೆಹನಾಯ್ ಮೊಳಗುವಾಗ..) ಎನ್ನುವ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಕೇಳಿಕೊಂಡಿದ್ದರನ್ವಯ ಈ ಕಾದಂಬರಿಯನ್ನು ಅನುವಾದಿಸಿದ್ದೇನೆ.
ಈ ಕೃತಿಯನ್ನು ಭಾರತದ ಚರಿತ್ರೆಯ ಒಂದು ಭಾಗವಾಗಿ ಪರಿಗಣಿಸಬೇಕಾಗುತ್ತದೆ, ಎನ್ನುವುದು ನನ್ನದೊಂದು ಅನಿಸಿಕೆ. ಕ್ರಿಸ್ತಶಕ ಆರನೆಯೋ ಏಳನೆಯೋ ಶತಮಾನದಲ್ಲಿ ಇರಾನ್ನಿಂದ ಧಾರ್ಮಿಕ ಮತಾಂತರದ ಬೆದರಿಕೆಗೆಯಿಂದಾಗಿ ಸಮುದಾಯವೊಂದು ವಲಸೆ ಬಂದಾಗ, ಭಾರತವು ಅವರನ್ನು ಎರಡೂ ಕೈಗಳನ್ನು ಚಾಚಿ ಸ್ವೀಕರಿಸಿತ್ತು. ಭಾರತವು ಎಲ್ಲಾ ಧರ್ಮಗಳಿಗೆ ಸೌಹಾರ್ದತೆಯ ನೆರಳನ್ನು ಒದಗಿಸಿದ್ದರ ಮತ್ತೊಂದು ನಿದರ್ಶನವಿದು. ಪಾರ್ಸಿ ಅಥವಾ ಝೋರೊಸ್ಟಿçಯನ್ ಎಂಬ ಸಮುದಾಯವಾಗಿತ್ತು ಅದು. ಆ ಸಮುದಾಯದ ಕಥಾವಸ್ತುವಿರುವ ಈ ಕಾದಂಬರಿ ಕಳೆದ ಶತಮಾನದ ಆರಂಭದಲ್ಲಿ ಆರಂಭಗೊAಡು ಆ ಶತಮಾನದ ದ್ವಿತಿಯಾರ್ಧದವರೆಗೂ ಚಾಚಿಕೊಂಡಿದ್ದು, ಮೂರು ತಲೆಮಾರುಗಳ ಕಥೆಯನ್ನಾಗಿ ಹೆಣೆಯಲಾಗಿದೆ..
ಪಾರ್ಸಿ ಜನಾಂಗದ ಆಚರಣೆ ಸಂಪ್ರದಾಯಗಳಲ್ಲಿ ಅನೇಕ ವೈವಿಧ್ಯತೆಯಿರುವುದನ್ನು ಲೇಖಕರು ಹೆಚ್ಚಿನ ಅಧ್ಯಯನ ನಡೆಸಿಯೇ ಇಲ್ಲಿ ವಿವರಿಸಿದ್ದಾರೆ. ಸಮುದಾಯದ ಮನುಷ್ಯ ಸಾವನ್ನಪ್ಪಿದಾಗ ಆತನ ಮೃತದೇಹದ ವಿಲೆವಾರಿ ಮಾಡುವುದರ ಆಚರಣೆಯನ್ನು ತುಂಬಾ ಕುತೂಹಲಕಾರಿಯಾಗಿ ಲೇಖಕರು ಚಿತ್ರಿಸಿದ್ದಾರೆ. ಈ ಸಮುದಾಯವು ಪ್ರಮುಖವಾಗಿ ಜೀವನ ನಡೆಸುತ್ತಿರುವ ಮುಂಬೈ ನಗರದ ಸಾಮಾನ್ಯ ಜನಜೀವನವೂ ಈ ಕಾದಂಬರಿಯಲ್ಲಿ ಹಾಸುಹೊಕ್ಕಾಗಿದೆ.
ಮನುಷ್ಯ ಜೀವನದಲ್ಲಿ ಕಂಡು ಬರುವ ಪ್ರೀತಿ, ಸ್ನೇಹ. ವಂಚನೆ, ಸೌಹಾರ್ದತೆ, ಕಾಳಜಿ ಮುಂತಾದ ಮಾನವೀಯ ಭಾವನೆಗಳನ್ನು ಬಹಳ ಸ್ವಾರಸ್ಯಪೂರ್ಣವಾಗಿ ಚಿತ್ರಿಸಿರುವ ಲೇಖಕ ಡಾ. ಪ್ರೇಮ್ ರಾಜ್ರವರು, ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆಂದೇ ನನ್ನ ಅನಿಸಿಕೆ…
ಲೇಖಕರು ಸರಳ ಮಲಯಾಳಂ ಭಾಷೆಯಲ್ಲಿ ಈ ಕಾದಂಬರಿಯನ್ನು ರಚಿಸಿದ್ದು, ಅನುವಾದಿಸಲು ನನಗೆ ಹೆಚ್ಚಿನ ಖುಷಿ ಕೊಟ್ಟಿರುತ್ತದೆ. ಅದಕ್ಕಾಗಿ ಡಾ. ಪ್ರೇಮ್ ರಾಜ್ರವರಿಗೆ ಧನ್ಯವಾದಗಳು…
ಕೆ. ಪ್ರಭಾಕರನ್
Leave a Reply