Filmolic Foundation presents Cinema Anthranga International Film Festival

Filmolic Foundation presents Cinema Anthranga International Film Festival & Public Eye Social Impact Awards – 2021

Filmolic Foundation presents Cinema Antharanga  2nd Film Festival  held in Gandhi Bhavan, Kumarakrupa Road, Bangalore on 25th Dec 2021.

ಫಿಲ್ಮಾಹಾಲಿಕ್ ಫೌಂಡೇಶನ್ ಅರ್ಪಿಸುವ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ -2021

ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಡಿಸೆಂಬರ್ 25 ನೇ ತಾರೀಖು 2021 ರಂದು ಗಾಂಧಿ ಭವನ ಕುಮಾರಕೃಪಾ ರಸ್ತೆ ಶೇಷಾದ್ರಿಪುರಂ ಬೆಂಗಳೂರು ನಲ್ಲಿ ಎರಡನೇ ವರ್ಷದ ಸಿನಿಮಾ ಅಂತರಂಗ ಚಲನಚಿತ್ರೋತ್ಸವ ಹಾಗೂ ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು. 50ಕ್ಕೂ ಹೆಚ್ಚು ಸಿನಿಮಾಗಳನ್ನು ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಇಂಡಿಪೆಂಡೆಂಟ್ ಚಲನಚಿತ್ರಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದರು. ಬೆಳಗ್ಗೆ ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟನಾ ಸಮಾರಂಭ ಮಾಡಿದರು ನಂತರ ಚಲನಚಿತ್ರೋತ್ಸವಕ್ಕೆ ಸಲ್ಲಿಸಿದ್ದ ಮೂರು ಉತ್ತಮ ಚಿತ್ರಗಳನ್ನು ಪ್ರದರ್ಶಿಸಲಾಯಿತು. ದನಗಳು, ಕೇರಳ ಪ್ಯಾರಡಿಸೋ, ದಾರಿ ಯಾವುದಯ್ಯ ವೈಕುಂಟಕ್ಕೆ ಚಿತ್ರಗಳನ್ನು ಪ್ರದರ್ಶಿಸಿದರು.
ಚಿತ್ರ ನಿರ್ಮಾಣ ಕಾರ್ಯಗಾರವನ್ನು ಅಂತರಾಷ್ಟ್ರೀಯ ಚಿತ್ರ ನಿರ್ಮಾಪಕರು ನಿರ್ದೇಶಕರು ಡಾ||ರಾಜಾ ಬಾಲಕೃಷ್ಣರವರು ನಡೆಸಿಕೊಟ್ಟರು. ಚಲನಚಿತ್ರ ನಿರ್ಮಾಣ ಚರ್ಚೆಯಲ್ಲಿ ಕರ್ನಾಟಕದಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿರುವ ಹಾಗೂ ಹೆಸರಾಂತ ಚಿತ್ರ ತಯಾರಕರು ಪಾಲ್ಗೊಂಡರು ಇವರಲ್ಲಿ ಶ್ರೀ ಅವಿನಾಶ್ ಶೆಟ್ಟಿ, ಶ್ರೀ ಪ್ರಯಾಗ್, ಶ್ರೀ ನಂದಲಿಕೆ ನಿತ್ಯಾನಂದ ಪ್ರಭು, ಡಾ|| ರಾಜಗೋಪಾಲನ್, ಡಾ|| ರಾಜಾ ಬಾಲಕೃಷ್ಣ, ಅಕ್ಷಿ ಚಿತ್ರತಂಡದಿಂದ ಶ್ರೀ ಕಲಾದೇಗುಲ ಶ್ರೀನಿವಾಸ್, ಶ್ರೀ ಮನೋಜ್ ಕುಮಾರ್, ಶ್ರೀ ಮುಕುಲ್ ಗೌಡ ರವರು ಕರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಫಿಲ್ಮಾಹಾಲಿಕ್ ಫೌಂಡೇಶನ್ ತಂಡದಿಂದ ಶ್ರೀ ಲಕ್ಷ್ಮೀಶ ರಾಜು ಹಾಗೂ ಶ್ರೀಮತಿ ಪ್ರವೀಣಾ ಕುಲ್ಕರ್ಣಿ ರವರು ಹಾಜರಿದ್ದರು.
ಸಂಜೆಯ ಕಾರ್ಯಕ್ರಮವನ್ನು ವಿಶೇಷ ಅತಿಥಿಗಳಾದ ಪದ್ಮಶ್ರೀ ಡಾ|| ದೊಡ್ಡರಂಗೇಗೌಡರು ದೀಪ ಬೆಳಗಿಸುವ ಮುಖಾಂತರ ಪ್ರಾರಂಭಿಸಿದರು. ಸಂಗೀತ ನಿರ್ದೇಶಕರು ಶ್ರೀ ವಿ ಮನೋಹರ್, ಖ್ಯಾತ ಬರಹಗಾರ್ತಿ ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ದೇವಸ್ಥಾನದ ಮುಖ್ಯಸ್ಥರಾದ ಡಾ|| ಅಂಬರೀಶ್ ಜಿ, ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಆದಿತ್ಯ. ಆರ್. ಎ, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಶ್ರೀ ದಿಲೀಪ್ ಕುಮಾರ್ ಹೆಚ್ ಆರ್, ಭಾರತ ಸಾರಥಿ ಪತ್ರಿಕೆಯ ಶ್ರೀ ಗಂಡಸಿ ಸದಾನಂದ ಸ್ವಾಮಿ ರವರು ಉಪಸ್ಥಿತರಿದ್ದರು. ಅಪ್ಪು ಅಜರಾಮರ ಕಾರ್ಯಕ್ರಮದಲ್ಲಿ ಅಪ್ಪು ಅವರ ಚಿತ್ರವನ್ನು ರಬಿಕ್ ಕ್ಯೂಬ್ಸ್ ನಲ್ಲಿ ಶ್ರೀ ಅರಿಹಂತ ಜೈನ್ ರವರು ಚಿತ್ರಿಸಿದರು, ಅಪ್ಪು ರವರ ಸವಿನೆನಪಿನಲ್ಲಿ ಅನೇಕರು ತಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿ ಹಾಡುಗಳನ್ನು, ನೃತ್ಯ ಹಾಗೂ ಮೋನೋ ಆಕ್ಟಿಂಗ್ ಮಾಡಿ ಕಳುಹಿಸಿದ್ದ ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ ರವರು ಬರೆದಿರುವ “ವ್ಯೂಹ” ಕಾದಂಬರಿಯನ್ನು ಪದ್ಮಶ್ರೀ ಡಾ|| ದೊಡ್ಡರಂಗೇಗೌಡರು ಹಾಗೂ ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು. ವ್ಯೂಹ ಕಾದಂಬರಿಯು ಮುಂದಿನ ದಿನಗಳಲ್ಲಿ ಚಿತ್ರವಾಗಿ ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯಿಂದ ಕಿಶೋರ್ ಎಂಟರ್ಟೇನರ್ಸ್ ಮುಖಾಂತರ ತಯಾರಿಸಲಾಗುತ್ತಿದೆ. ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ರವರು ನಿರ್ಮಿಸಿದ್ದ ಅಪ್ಪು ನೆನಪು ಹಾಡನ್ನು ಈ ಸಮಾರಂಭದಲ್ಲಿ ಮ್ಯೂಸಿಕ್ ಬಾಕ್ಸ್ ಬಿಡುಗಡೆ ಮಾಡಲಾಯಿತು.
ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯ ಮತ್ತೊಂದು ಗರಿ ಫಿಲ್ಮಾಹಾಲಿಕ್ ಕ್ಲಬ್ ಅನ್ನು ಉದ್ಘಾಟಿಸಲಾಯಿತು. ಫಿಲ್ಮಾಹಾಲಿಕ್ ಕ್ಲಬ್ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ, ಸಾಂಸ್ಕೃತಿಕ, ಸಾಹಿತ್ಯ, ಸಾಮಾಜಿಕ, ಕ್ರೀಡೆ ಹಾಗೂ ಇನ್ನೂ ಅನೇಕ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಫಿಲ್ಮಾಹಾಲಿಕ್ ಕ್ಲಬ್ ಗೆ ಸದಸ್ಯತ್ವ ಸಂಭದಿಸಿದ ಮಾಹಿತಿಗಾಗಿ ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಿನಿಮಾ ಅಂತರಂಗ ಚಲನಚಿತ್ರೋತ್ಸವದಲ್ಲಿ 11 ವಿಶಿಷ್ಟ ವಿಭಾಗಗಳಲ್ಲಿ ಪ್ರಶಸ್ತಿ ಕೊಡಲಾಯಿತು. ಈ ಕೆಳಕಂಡಂತೆ ಚಿತ್ರಗಳು ಪ್ರಶಸ್ತಿಯನ್ನು ಪಡೆದರು .ಉತ್ತಮ ಚಿತ್ರಕ್ಕಾಗಿ ಕೇರಳ ಪ್ಯಾರಡಿಸೋ, ಉತ್ತಮ ನಿರ್ದೇಶಕರಾಗಿ ಸಿದ್ದು ಪೂರ್ಣಚಂದ್ರ (ದಾರಿ ಯಾವುದಯ್ಯ ವೈಕುಂಟಕ್ಕೆ), ಉತ್ತಮ ಸಹನಟರಾಗಿ ಬಾಲರಾಜ್ವಾಡಿ (ದಾರಿ ಯಾವುದಯ್ಯ ವೈಕುಂಟಕ್ಕೆ), ಉತ್ತಮ ಚಿತ್ರಕಥೆಗಾಗಿ ಬಿ. ಲೆನಿನ್ (ಕಟ್ಟಿಲ್), ಉತ್ತಮ ನಿರ್ಮಾಣ ಕ್ಕಾಗಿ ದ್ವಿಭಾಜಕ, ಉತ್ತಮ ಸಂಕಲನಕ್ಕಾಗಿ ರತೇಶ್ ಕೌಸಲ್ಯ (ದ ಮಿ ಆಫ್ ಡ್ರಾಗನ್ ಫ್ಲೈ), ಉತ್ತಮ ಛಾಯಾಗ್ರಹನಕ್ಕಾಗಿ ರಾಜು ನ್ ಎಂ (ಮಂತ್ರಿ ಹಾಂಡ್ಸಂ ಸೋಲ್ಸ್), ಉತ್ತಮ ನಟಿಯಾಗಿ ಸೃಷ್ಟಿ ದಂಗಿ (ಕಟ್ಟಿಲ್), ಉತ್ತಮ ನಟರಾಗಿ ಕರ್ಣ ಕುಮಾರ್ (ಕವಡೆ ಕಾಸಿನ), ಉತ್ತಮ ಸಂಗೀತಕ್ಕಾಗಿ ಜೀವರತ್ನಮ್ (ಕವಡೆ ಕಾಸಿನ) ಅವರು ಪ್ರಶಸ್ತಿಯನ್ನು ಪಡೆದರು. ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನ ದನಗಳು ಎಂಬ ಚಿತ್ರ ಪಡೆಯಿತು. ಪಬ್ಲಿಕ್ ಐ ಸೋಶಿಯಲ್ ಇಂಪ್ಯಾಕ್ಟ್ ಅವಾರ್ಡ್ ವಿಜೇತರು ಬೆಂಗಳೂರು ಹುಡುಗರು (ಸಮಾಜ ಕಾರ್ಯಕರ್ತರು), ಶ್ರೀ ಶಾರುಖ್ ಖಾನ್ (ಮಾನವ ಹಕ್ಕುಗಳು), ಡಾ| ಅಂಬರೀಶ್ ಜಿ (ಸಮಾಜ ಕಾರ್ಯಕರ್ತರು), ಶ್ರೀ ಗಂಡಸಿ ಸದಾನಂದ ಸ್ವಾಮಿ (ಮಾಧ್ಯಮ), ಶ್ರೀ ಕಾರ್ತಿಕ್ ವಿ ಸೋಮಯಾಜಿ (ಉದ್ಯಮಿ), ಮೇಘ ( ಸಮಾಜ ಕಾರ್ಯಕರ್ತರು), ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ (ಸಾಹಿತ್ಯ), ಶ್ರೀಮತಿ ಜಯಲಕ್ಷ್ಮಿ ಬಾಯಿ (ಫ್ಯಾಷನ್ ವಿನ್ಯಾಸಕಿ), ಶ್ರೀ ಕೈರಂ ವಾಶಿ (ಚಿತ್ರೋದ್ಯಮ), ಶ್ರೀಮತಿ ರೇಣುಕಾ ರೆಡ್ಡಿ (ರಂಗಭೂಮಿ), ವಿದ್ವಾನ್ ಚಿಂತನಪಲ್ಲಿ ವಿ ಶ್ರೀನಿವಾಸ್ (ಸಂಗೀತ), ಶ್ರೀಮತಿ ವಿಜಯಶ್ರೀ ವಿದುಲರಿ (ಸಾಹಿತ್ಯ), ಡಾ| ಪ್ರಯಾಗ್ (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ), ಡಾ| ರಾಜ ಬಾಲಕೃಷ್ಣ (ಚಿತ್ರೋದ್ಯಮ), ಶ್ರೀ ಪ್ರಕೃತಿ ಪ್ರಸನ್ನ (ಸಮಾಜ ಕಾರ್ಯಕರ್ತರು), ಶ್ರೀಮತಿ ಕವಿತಾ ಶ್ರೀನಾಥ್ (ಸಮಾಜ ಕಾರ್ಯಕರ್ತರು), ಶ್ರೀ ಜಗದೀಶ್ ಕುಮಾರ್ (ವಕೀಲ), ಪದ್ಮಶ್ರೀ ಡಾ| ದೊಡ್ಡರಂಗೇಗೌಡರು (ಚಿತ್ರೋದ್ಯಮ & ಸಾಹಿತ್ಯ) ಹಾಗೂ ಶ್ರೀ ಸುನಿಲ್ ಪುರಾಣಿಕ್ (ಚಿತ್ರೋದ್ಯಮ).
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಹಾಗೂ ಸಿನಿಮಾರಂಗದಲ್ಲಿ ಸಾಧನೆಯನ್ನು ಮಾಡಿರುವ ಹಲವು ಗಣ್ಯರಿಗೆ ಸನ್ಮಾನ ಮಾಡಲಾಯಿತು. ಶ್ರೀ ಮಂದಗೆರೆ ರಾಮಕುಮಾರ್ (ಸಮಾಜ ಕಾರ್ಯಕರ್ತರು), ಸವಿತಾ ರಾಮು (ಸಮಾಜ ಕಾರ್ಯಕರ್ತರು), ಶ್ರೀ ನಂದಲಿಕೆ ನಿತ್ಯಾನಂದ ಪ್ರಭು (ಚಿತ್ರೋದ್ಯಮ), ಶ್ರೀ ಅವಿನಾಶ್ ಶೆಟ್ಟಿ (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ), ಶ್ರೀ ಕಲಾದೇಗುಲ ಶ್ರೀನಿವಾಸ್ (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ), ಶ್ರೀ ಗುರು ಗಂಗಾಧರ (ಸಮಾಜ ಕಾರ್ಯಕರ್ತರು), ಪ್ರವೀಣಾ ಕುಲಕರ್ಣಿ (ಚಿತ್ರೋದ್ಯಮ), ಶ್ರೀ ರಾಮದಾಸ್ ನಾಯ್ಡು (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ), ಶ್ರೀ ಡೇವಿಡ್ ಆರ್ (ಚಿತ್ರೋದ್ಯಮ), ಶ್ರೀ ಪ್ರೀತಮ್ ಶೆಟ್ಟಿ (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ), ಶ್ರೀ ರಾಕೇಶ್ ಜೈನ್ (ಚಿತ್ರೋದ್ಯಮ), ಶ್ರೀ ರವಿ (ಚಿತ್ರೋದ್ಯಮ), ಶ್ರೀ ಎನ್ ಟಿ ಸುರೇಶ್ (ಸಮಾಜ ಕಾರ್ಯಕರ್ತರು), ಶ್ರೀ ವಿಜೇಂದ್ರ ಕುಮಾರ್ (ಸಮಾಜ ಕಾರ್ಯಕರ್ತರು), ಡಾ| ರಾಜಗೋಪಾಲ್ (ಚಿತ್ರೋದ್ಯಮ), ಶ್ರೀ ಮನೋಜ್ ಕುಮಾರ್ (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ), ಶ್ರೀ ಮುಕುಲ್ ಗೌಡ (ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರೋದ್ಯಮ).
ಮಾಧ್ಯಮ ಮಿತ್ರರು ಫಿಲಂ ಗಪ್ಪ, ಲೈವ್ ಕನ್ನಡ ಬೆಂಗಳೂರು, ಹೈಬ್ರೀಡ್ ನ್ಯೂಸ್, ಸಿರಿ ಟಿವಿ, ಎಂ ಎಂ ಎಂ ಮೀಡಿಯಾ ಗ್ರೂಪ್, ಸಿನಿ ಲಹರಿ, ಚಿತ್ತಾರ, ಕೆ ಬೀಟ್ಸ್ ಉಪಸ್ಥಿತರಿದ್ದರು.
ಬಿ ಸಿನಿಮಾಸ್, ಸುರ್ವೆ ಪತ್ರಿಕೆ, ಕನ್ನಡ ಫಿಲ್ಮೋಲಜಿ, ಮಫ್ತಿ ಪತ್ರಿಕೆ, ಜಸ್ಟ್4u ಇನ್ಫೋಟೇನ್ಮೆಂಟ್, ಪೂವರಿ, ವಿಜಯ ಟೈಮ್ಸ್, ರಿಯಲ್ ಟೈಮ್ಸ್ ಹಾಗೂ ನಮ್ಮ ಸೂಪರ್ ಸ್ಟಾರ್.
ಈ ಚಿತ್ರೋತ್ಸವಕ್ಕೆ ಸಹ ಪ್ರಾಯೋಜಕರಾಗಿ ದಾರಿ ಆಂಜನೇಯ ಸ್ವಾಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಮುಖ್ಯಸ್ಥರಾದ ಡಾ|ಅಂಬರೀಶ್ ಜಿ, ಕವಿತಾ ಕಲ್ಪತರು ಫೌಂಡೇಶನ್ ಮುಖ್ಯಸ್ಥರಾದ ಶ್ರೀಮತಿ ಕವಿತಾ ಶ್ರೀನಾಥ್, ಬರಹಗಾರ್ತಿ ಶ್ರೀಮತಿ ವಿಜಯಲಕ್ಷ್ಮಿ ಸತ್ಯಮೂರ್ತಿ, ಶ್ರೀ ಏನ್ ಟಿ ಸುರೇಶ್, ಶ್ರೀ ಪ್ರಕೃತಿ ಪ್ರಸನ್ನ, ಶ್ರೀಮತಿ ಸವಿತಾ ರಾಮು, ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಶ್ರೀ ದಿಲೀಪ್ ಕುಮಾರ್ ಹಾಗೂ ಭಾರತ ಸಾರಥಿ ಪತ್ರಿಕೆಯ ಶ್ರೀ ಗಂಡಸಿ ಸದಾನಂದ ಸ್ವಾಮಿ. ಈ ಚಿತ್ರೋತ್ಸವವನ್ನು ನಿರ್ವಹಣೆ ಮಾಡಿದ ಸಂಸ್ಥೆ ಸ್ಯಾಟರ್ನ್ ಮೀಡಿಯಾ. ಫಿಲ್ಮಾಹಾಲಿಕ್ ಫೌಂಡೇಶನ್ ತಂಡದಿಂದ ಶ್ರೀ ಕಿಶೋರ್ ಸಾವಂತ್, ಶ್ರೀ ಗಣೇಶ್, ಶ್ರೀ ಚಂದ್ರಕಾಂತ್ ಎಸ್, ಶ್ರೀ ಉದಯ್ ಕುಮಾರ್, ಶ್ರೀ ಲಕ್ಷ್ಮೀಶ ರಾಜು, ಶ್ರೀಮತಿ ಪ್ರಜ್ಞಾ ಬಿ, ಶ್ರೀ ಕಿರಣ್ ಬಿ ಎನ್, ಶ್ರೀಮತಿ ಪ್ರವೀಣಾ ಕುಲ್ಕರ್ಣಿ, ಶ್ರೀ ಮುರಳಿ, ಶ್ರೀಮತಿ ತೇಜಸ್ವಿನಿ ರಾವ್, ಶ್ರೀ ಜಯಪ್ರಕಾಶ್ ಇನ್ನೂ ಮುಂತಾದವರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ತಮ್ಮೆಲ್ಲರಿಗೂ ಧನ್ಯವಾದಗಳನ್ನು ಕೃತಜ್ಞತೆಗಳನ್ನು ಈ ಮೂಲಕ ತಿಳಿಸಲು ಆಶಿಸುತ್ತದೆ.
ಉದಯ್ ಕುಮಾರ್ ಹಾಗೂ ತೇಜಸ್ವಿನಿ ರಾವ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು
ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ಭಾರತದ ಅನೇಕ ಊರುಗಳಲ್ಲಿ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಲು ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯು ಯೋಜನೆಯನ್ನು ರೂಪಿಸಿದೆ ತಮ್ಮೆಲ್ಲರ ಬೆಂಬಲ ಹೀಗೆ ಇರಲಿ.
ಫಿಲ್ಮಾಹಾಲಿಕ್ ಕ್ಲಬ್ಗೆ ಸದಸ್ಯತ್ವ ಪಡೆಯಲು ಫಿಲ್ಮಾಹಾಲಿಕ್ ಫೌಂಡೇಶನ್ ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ filmaholicfoundation@gmail.com / filmaholicclub@gmail.com

Best comment will get a FREE movie ticket.

Leave a Reply

Your email address will not be published.


*