Heegeke Nee Doora Hoguve is a Bilingual film

Heegeke Nee Doora Hoguve is a Bilingual film (made simultaneously in Kannada and Hindi, the Hindi title being THE VISITORS) and will also be dubbed in Konkani, Tamil, Telugu, Malayalam languages.
The film is a beautiful family story with lots of emotions and sentiment value. Being set in a Catholic family, it showcases the bond of a father and his son. Shot entirely in Bangalore, the film now in the stages of completion is set for an OTT platform release and will be showcased in all major Indian and International film festivals.
Banner: Ashmita & Amisha Films
Producer: Rajesh Chowdhury
Story, Screenplay, Direction: Sandeep Malani
Co-Directors: Silver Malani & Santosh Chawla
Associate Director: Gurudutt Sreekanth (Kannada)
DOP: Selvam Mathappan
Music: Veer Samarth
Cast: Sandeep Malani, Ester Noronha, Nihal Tauro, Rajeev Pillai, Uday Surya, Seema Buthello, Ashwin Dcosta, Jayalakshmi, Jigar Chanana, Hareram Thakur, Ashmita Chowdhury, Amisha Chowdhury.
This is Sandeep Malani’s 10 film as a director and 100th film as an actor. Of lately Malani has been part of several Kannada, Tamil, Telugu, Malayalam, Konkani, Tulu, Hindi films and also has done films in Oriya, Marathi, Gujarati too.
Having seen in Yuvaratna, Iruvudellava Bittu, Mookavismitha and many others, forthcoming films include Kabzaa, Sugar Factory, Love Mocktail 2, Marigold and many others.
Ester Noronha has worked in many Konkani and Telugu films and also is an state award winner. She was recently seen in the successful film Lanke and her forthcoming films include DNA, Local Train
Nihal Tauro, a singer who was in the Top 5 of the reality show Indian Idol has won millions of hearts with a great fan following. He debuts in the film as an actor.
Uday Surya, is a wellknown household name in the Kannada TV serials playing a baddie. His earlier film was Sulige Sikkidaaga
Seema Buthello is a Konkani actress and was a beauty pageant winner.
Rajeev Pillai is a well known Malayalam film actor with several hits to his credit and also done a few Kannada films and now working on Hindi and Telugu films.
Ashwin Dcosta is the young popular Konkani playback singer with many hit songs to his credit.

ಸಂದೀಪ್ ಮಲಾನಿಯವರ ನೂರನೇ ಸಿನಿಮಾ
ಹೀಗೇಕೆ ನೀ ದೂರ ಹೋಗುವೆ (ಕನ್ನಡ)
ದಿ ವಿಸಿಟರ್ಸ್ (ಹಿಂದಿ)
“ಹೀಗೇಕೆ ನೀ‌ ದೂರ ಹೋಗುವೆ” ಬಹುಭಾಷಾ ಚಿತ್ರವಾಗಿದ್ದು ಕನ್ನಡ ಹಾಗೂ ಹಿಂದಿ (ದಿ ವಿಸಿಟರ್ಸ್ ಎಂಬ ಶೀರ್ಷಿಕೆಯಲ್ಲಿ) ಭಾಷೆಗಳಲ್ಲಿ  ಏಕಕಾಲದಲ್ಲಿ ಚಿತ್ರೀಕರಣವಾಗಲಿದೆ. ಇಷ್ಟೇ ಅಲ್ಲದೆ ಇದು ಕೊಂಕಣಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಕೂಡಾ ಆಗಲಿದೆ.
ಈ ಸಿನಿಮಾವು ಒಂದು ಸುಂದರ ಸಾಂಸಾರಿಕ ಚಿತ್ರವಾಗಿದ್ದು, ಕೌಟುಂಬಿಕ ಸಂಬಂಧಗಳ ಮಹತ್ವವನ್ನು ಎತ್ತಿ ಹಿಡಿಯುವ ಮತ್ತು ಪ್ರತಿಯೊಂದು ಪಾತ್ರಗಳ ಮೂಲಕ ಅನೇಕ ಭಾವನೆಗಳನ್ನು ಪ್ರತಿಬಿಂಬಿಸುವ ಕಥಾನಕವನ್ನು ಹೊಂದಿದೆ. ಒಂದು ಕ್ಯಾಥೊಲಿಕ್ ಕುಟುಂಬದ ಹಿನ್ನಲೆಯುಳ್ಳ ಈ ಚಿತ್ರವು ಒಬ್ಬ ತಂದೆ ಮತ್ತು ಮಗನ ಅವಿನಾಭಾವ ಸಂಬಂಧದ ಸುತ್ತ ಹೆಣೆದ ಕತೆಯುಳ್ಳದ್ದಾಗಿದೆ. ಬೆಂಗಳೂರಿನ‌ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಈ ಸಿನಿಮಾವು ಇದೀಗ ಮುಕ್ತಾಯದ ಹಂತದಲ್ಲಿದ್ದು ಸದ್ಯದಲ್ಲೇ ಓಟಿಟಿ ಮೂಲಕ ಬಿಡುಗಡೆಯಾಗಲಿದೆ. ಜೊತೆಗೆ, ಹಲವಾರು ದೇಶೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳಲಿದೆ.
ನಿರ್ಮಾಣ ಸಂಸ್ಥೆ : ಅಶ್ಮಿತಾ ಆ್ಯಂಡ್ ಅಮಿಶಾ ಫಿಲ್ಮ್ಸ್ನಿರ್ಮಾಪಕರು : ರಾಜೇಶ್ ಚೌಧುರಿಕತೆ, ಚಿತ್ರಕತೆ, ನಿರ್ದೇಶನ : ಸಂದೀಪ್ ಮಲಾನಿಸಹ ನಿರ್ದೇಶಕರು : ಸಿಲ್ವರ್ ಮಲಾನಿ ಮತ್ತು ಸಂತೋಷ್ ಚಾವ್ಲಾಸಹಾಯಕ ನಿರ್ದೇಶಕರು : ಗುರುದತ್ ಶ್ರೀಕಾಂತ್ (ಕನ್ನಡ)ಛಾಯಾಗ್ರಹಣ : ಸೆಲ್ವಂ ಮುತ್ತಪ್ಪನ್ಸಂಗೀತ : ವೀರ್ ಸಮರ್ಥ್
ತಾರಾಗಣ: ಸಂದೀಪ್ ಮಲಾನಿ, ಎಸ್ತರ್ ನೊರೋನ್ಹಾ, ನಿಹಾಲ್ ತಾವ್ರೋ, ರಾಜೀವ್ ಪಿಳ್ಳೈ, ಉದಯ್ ಸೂರ್ಯ, ಸೀಮಾ ಬುತೆಲ್ಲೋ, ಅಶ್ವಿನ್ ಡಿ’ಕೋಸ್ಟಾ, ಜಯಲಕ್ಷ್ಮಿ, ಜಿಗರ್ ಚನಾನಾ, ಹರೇರಾಮ್ ಠಾಕೂರ್, ಅಶ್ಮಿತಾ ಚೌಧುರಿ, ಅಮೀಶಾ ಚೌಧುರಿ
ಇದು ಸಂದೀಪ್ ಮಲಾನಿಯವರ ನಿರ್ದೇಶನದ ಹತ್ತನೇ ಹಾಗೂ ನಟನೆಯ ನೂರನೇ ಚಿತ್ರ. ಇತ್ತೀಚಿನ ದಿನಗಳಲ್ಲಿ ಮಲಾನಿಯವರು ಅನೇಕ ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಕೊಂಕಣಿ, ಹಿಂದಿ ಸಿನಿಮಾಗಳಲ್ಲಷ್ಟೇ ಅಲ್ಲದೆ ಒರಿಯಾ, ಗುಜರಾತಿ ಹಾಗೂ ಮರಾಠಿ ಸಿನಿಮಾಗಳಲ್ಲೂ ಅಭಿನಯಿಸಿ ಹೆಸರುವಾಸಿಯಾಗಿದ್ದಾರೆ.  ಇತ್ತೀಚೆಗೆ ಬಿಡುಗಡೆಯಾದ ಯುವರತ್ನ, ಇರುವುದೆಲ್ಲವ ಬಿಟ್ಟು, ಮೂಕವಿಸ್ಮಿತ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಇವರು ಮುಂದೆ ಬಿಡುಗಡೆಯಾಗಲಿರುವ ಕಬ್ಜಾ, ಶುಗರ್ ಫ್ಯಾಕ್ಟರಿ, ಲವ್ ಮಾಕ್ಟೇಲ್ -2, ಮಾರೀಗೋಲ್ಡ್ ಮತ್ತಿತರ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.
ಎಸ್ತರ್ ನೊರೋನ್ಹಾರವರು ಅನೇಕ ಕನ್ನಡ, ಕೊಂಕಣಿ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಉದಯೋನ್ಮುಖ ನಟಿ. ರಾಜ್ಯ ಪ್ರಶಸ್ತಿ ವಿಜೇತೆಯೂ ಆಗಿರುವ ಇವರು ಇತ್ತೀಚೆಗೆ ಬಿಡುಗಡೆಯಾದ ‘ಲಂಕೆ’ ಸಿನಿಮಾದಲ್ಲಿ ನಾಯಕಿಯಾಗಿದ್ದರು. ಮುಂದೆ ಬಿಡುಗಡೆಯಾಗಲಿರುವ ಇವರ ಸಿನಿಮಾಗಳಲ್ಲಿ ಡಿಎನ್ ಎ, ಲೋಕಲ್ ಟ್ರೈನ್ ಸೇರಿದೆ.
ನಿಹಾಲ್ ತಾವ್ರೋ, ಸಂಗೀತ ಪ್ರೇಮಿಗಳಿಗೆ ಪರಿಚಿತ ಹೆಸರು. ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ ಐಡಲ್ ಸಂಗೀತ ಸ್ಪರ್ಧೆಯ ಟಾಪ್ 5 ಸ್ಪರ್ಧಿಯಾಗಿದ್ದ ಇವರು ತಮ್ಮ ಮಧುರ ಕಂಠದಿಂದ ದೇಶಾದ್ಯಂತ ಜನರ ಗಮನ ಸೆಳೆದಿದ್ದರು. ಈ ಸಿನಿಮಾದ ಮೂಲಕ ಇವರು ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಉದಯ ಸೂರ್ಯ ಈಗಾಗಲೇ ಹಲವಾರು ಟಿವಿ ಧಾರಾವಾಹಿಗಳಲ್ಲಿ ಖಳನಾಯಕನ‌ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿರುವವರು. ಈ ಹಿಂದೆ ಸಂದೀಪ್ ಮಲಾನಿಯವರ ‘ಸುಳಿಗೆ ಸಿಕ್ಕಿದಾಗ’ ಸಿನಿಮಾದಲ್ಲೂ ಅಭಿನಯಿಸಿದ್ದರು.
ಸೀಮಾ ಬುತೆಲ್ಲೋ ಕೊಂಕಣಿ ಭಾಷೆಯ ಜನಪ್ರಿಯ ನಟಿ ಹಾಗೂ ಸೌಂದರ್ಯ ಸ್ಪರ್ಧೆಯ ವಿಜೇತೆ.
ರಾಜೀವ್ ಪಿಳ್ಳೆ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಹಾಗೂ ಅನೇಕ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿರುವ ಕೀರ್ತಿ ಹೊಂದಿರುವವರು. ಕನ್ನಡದಲ್ಲೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ಇವರು ಪ್ರಸ್ತುತ ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅಶ್ವಿನ್ ಡಿ’ಕೋಸ್ಟಾ ಓರ್ವ ಜನಪ್ರಿಯ ಕೊಂಕಣಿ ಹಿನ್ನೆಲೆ ಗಾಯಕ. ಅತ್ಯಂತ ಕಡಿಮೆ ವಯಸ್ಸಿನಲ್ಲೇ ಅನೇಕ ಜನಮೆಚ್ಚಿದ ಗೀತೆಗಳನ್ನು ಹಾಡಿರುವ ಯುವ ಗಾಯಕ.

Best comment will get a FREE movie ticket.

Leave a Reply

Your email address will not be published.


*