Point 11 – 5 Short Films

ಪಾಯಿಂಟ್ 11:Review by Lokesh Shankar Narayan
Production : White BoardDirector : Pavan Kashyap;  Amulya Jayaprakash; Madhu Mahantesh; JayanthCast: Sandeep Malani; Vasant Kumar; Rachana Herur; Vaishnavi Raj; Sumuka Prasad; Shree Vaishnav; Sri Hemesh; Nishita; Bhoomika Desai; Sahana Baburao 

ಸರಿಸುಮಾರು,ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದ ಐದು ಕಿರು ಚಿತ್ರಗಳ ಗುಚ್ಛ, “ಪಾಯಿಂಟ್ 11”. ಐದೂ‌‌ ಚಿತ್ರಗಳಲ್ಲಿ ಇರುವ ಕಾಮನ್ ಪಾಯಿಂಟ್ ಅಂದ್ರೆ ಇಬ್ಬರ ನಡುವಿನ‌ ಫೋನ್ ಸಂಭಾಷಣೆ. ಹಾಗಾಗಿ ಮಾಸ್ಕ್ ಹಾಕೋ ಟಾಸ್ಕ್ ಇಲ್ದೇ, ಲಾಕ್ ಡೌನ್ ಸಂದರ್ಭದಲ್ಲಿ‌ ಸೋಶಿಯಲ್ ಡಿಸ್ಟಾನ್ಸಿಂಗನ್ನು ಪರಿಪೂರ್ಣವಾಗಿ ಪಾಲಿಸಿದ ಚಿತ್ರವೆನ್ನಬಹುದು.
ಮೊದಲನೆಯ ಚಿತ್ರ”ಹಲೋ ಸರ್ ನಮಸ್ತೆ”. ಜೀವರಕ್ಷಕರು, ಕೊರೊನಾ ವಾರಿಯರ್ಸ್ ಗಳೆಂಬ ಗೌರವಕ್ಕೆ ಮೆಡಿ-‘ಕಳ್’ತನ ಯಾವ ರೀತಿ ಕಪ್ಪು ಚುಕ್ಕೆಯಾಗಬಹುದು ಅನ್ನುವುದನ್ನು ತಿಳಿಸುವ ಕತೆ. ಸಂಬಂಧವಿಲ್ಲದ ಸಂಭಾಷಣೆಯೊಂದಿಗೆ “ಸ್ಟ್ರೈಟ್” ಆಗಿ ಸಾಗುವ ಕತೆಗೆ ಕೊನೆಯಲ್ಲೊಂದು “ಟ್ವಿಸ್ಟ್” ಇದೆ. ಐದು ಚಿತ್ರಗಳಲ್ಲಿ ಇದೇ ‘ಬೆಸ್ಟ್’ ಇದೆ. ವಸಂತ್ – ಮಧು ಆ್ಯಕ್ಡಿಂಗ್ “ಮಸ್ತ್” ಇದೆ.
“KD” ಚಿತ್ರ ಇಬ್ಬರು ಬಾಡಿಗೆ ಹಂತಕರ ನಡುವೆ ಒಬ್ಬನನ್ನು ಕೊಲ್ಲುವ ಬಗ್ಗೆ ಹಂತ ಹಂತವಾಗಿ ನಡೆಯುವ ಸಂಭಾಷಣೆಯ ಕತೆ. ಆಫೀಸಲ್ಲಿ  ಕೆಲಸ ಮಾಡೋ ಇಬ್ಬರು ಪ್ರೊಫೆಶನಲ್ಸು ತಮ್ಮ ಆ ದಿನದ ಅಜೆಂಡಾ ಬಗ್ಗೆ ಡಿಸ್ಕಸ್ ಮಾಡೋ ರೀತಿ ಈ ಪ್ರೊಫೆಶನಲ್ ಕಿಲ್ಲರ್ಸು ಕೊಲೆ ಮಾಡೋ ವಿಧಾನಗಳ ಬಗ್ಗೆ ಡಿಸ್ಕಸ್ ಮಾಡೋ ಕಾಮಿಡಿ “ಕೊಲ್ಲಾ”ಡಿಗಳ ಕತೆ‌. ಸಂಭಾಷಣೆಯಲ್ಲಿ ಇನ್ನೂ ಸ್ವಲ್ಪ ಪನ್, ಫನ್ ಸೇರಿಸಿದ್ದರೆ ಸೂಪರ್ ಅನ್ನಿಸುತ್ತಿತ್ತು. ಕಿಲ್ಲರ್ಸ್ ಇಬ್ಬರೂ  ಲವಲವಿಕೆಯಿಂದ ನಟಿಸಿದ್ದಾರೆ.
“ನಮ್ಗೆಷ್ಟು ಕೊಬ್ಬು ಅಂದ್ರೆ”, ಕತೆ ಶುರುವಾಗೋದು ಹೇಗಿದ್ದೀಯ? ಊಟ ಆಯ್ತ? ಅನ್ನೋ ಮಾಮೂಲು ಸಂಭಾಷಣೆಯ ಜೊತೆ.  ಮಾಮೂಲಾಗೇ ಸಾಗುವ ಈ ಚಿತ್ರದಲ್ಲಿ ಹೇಳಿಕೊಳ್ಳುವ ವಿಷಯಗಳೇನೂ ಇಲ್ಲ. ಖುಷಿಯಾಗಿಲ್ಲದಿರೋಕೆ, ಜೀವನದಲ್ಲಿ ಎನನ್ನಾದರೂ ಸಾಧಿಸಲು ಆಗದಿರೋಕೆ ನಮಗೆ ನಾವೇ ಕೊಟ್ಟುಕೊಳ್ಳುವ ಕಾರಣಗಳೇ ಕಾರಣ ಅನ್ನುವ ಸ್ವವಿಮರ್ಶೆಯೊಂದಿಗೆ ಈ ಚಿತ್ರ ಮುಗಿಯುತ್ತದೆ. ಈ “ಪಂಚ”ಕಜ್ಜಾಯದಲ್ಲಿ ಸ್ವಲ್ಪ ಸಪ್ಪೆ ಐಟಮ್ ಅಂದ್ರೆ ಇದೇ. ಕೊನೇಲಿ ಏನೋ ಸ್ಪೆಶಲ್ ಡಿಶ್ ಇರಬಹುದು ಅಂತ ಕಾದ ಪ್ರೇಕ್ಷಕನಿಗೆ ಚಿತ್ರದಲ್ಲಿ ಕೊಬ್ಬಿನ ಅಂಶ ಸ್ವಲ್ಪ ಕಡಿಮೆ ಇತ್ತು ಅನ್ಸುತ್ತೆ.
ನಾಲ್ಕನೆಯ ಸಿನಿಮಾ “ಒಂದು ವಿಷಯ” ಇಬ್ಬರು ಸ್ನೇಹಿತೆಯರ ಕ್ಯಾಶುವಲ್ ಟಾಕ್. ಲವ್ ಮ್ಯಾಟರ್ ಗೆ ಬಂದಾಗ ಇಬ್ಬರಿಗೂ ಫುಲ್ ಶಾಕ್. ಆದರೆ ನೋಡ್ತಾ ಇರೋ ಪ್ರೇಕ್ಷಕರು ಮಾತ್ರ ಈ ತರದ್ದು ನಾನಾಲ್ರೆಡೀ  ನೋಡಿದ್ದೀನಿ ಬಿಡಿ ಅನ್ನಬಹುದು. ಸಸ್ಪೆನ್ಸ್ ರಿವೀಲ್ ಆಗೋ ಮೊದಲೇ ಊಹೆ ಮಾಡಬ”ಲ್ಲವ್”ನು ನಮ್ಮ ಪ್ರೇಕ್ಷಕ ಮಹಾಪ್ರಭು‌.ಗಮನ ಸೆಳೆಯುವ ಭೂಮಿಯವರದು ಸಹಜಾಭಿನಯ. ಸಹನಾಭಿನಯ ಚೆನ್ನಾಗಿದ್ದರೂ ಸಂಭಾಷಿಸುವ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಬೇಕಿದೆ.
ಲಾಸ್ಟ್ ಚಿತ್ರದ ಹೆಸರು “ಲಾಸ್ಟ್ ನೇಮ್”. ಫೇಮ್  ಸಿಗಬೇಕಾದರೆ ನೇಮ್ ಬೇಕು. ಆವಾಗಲೇ ‘ಪ್ರಸಾದ’ ಸಿಗೋದು ಅನ್ನುವ ಸದ್ಯದ ವಾಸ್ತವ ಸತ್ಯ ತಿಳಿಸುವ ಚಿತ್ರ. ವೈಷ್ಣವಿ ರಾಜ್  ಸಿನಿಮಾದೊಳಗೆ ಅವಾರ್ಡ್ ವಿನ್ನಿಂಗ್ ಪರ್ಫಾರ್ಮೆನ್ಸ್ ತೋರಿಸಿದರೆ ಸಂದೀಪ್ ಮಲಾನಿಯವರು ಗಾಂ-ಬೀರ್-ಯ ತುಂಬಿದ ಗಾಡ್ ಫಾದರ್ ಆಗಿ ಗಮನ ಸೆಳೆಯುತ್ತಾರೆ.
ಐದೂ ಚಿತ್ರಗಳೂ ಬರೀ ಫೋನ್ ಸಂಭಾಷಣೆಗೇ ಸೀಮಿತವಾಗಿರುವಾಗ  ಅವುಗಳ‌ ಏಕತಾನತೆಯನ್ನು ಬ್ರೇಕ್ ಮಾಡಲು ಬ್ರೇಕಿಂಗ್ ನ್ಯೂಸ್ ಗಳಂತಹ ಟ್ವಿಸ್ಡುಗಳಿರುವ ಕತೆಯನ್ನು ಆಯ್ಕೆ ಮಾಡಿದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು.
ಕೊನೆ ಮಾತು:” ಹಲೋ ಸರ್ ನಮಸ್ತೇ”, ನಿಮಗೆ “ಒಂದು ವಿಷ್ಯ” ಹೇಳ್ತೀನಿ, ನಾವು ಪ್ರೇಕ್ಷಕರಿದ್ದೀವಲ್ಲಾ, ದೊಡ್ಡ “KD” ಗಳು. “ನಮ್ಗೆಷ್ಟು ಕೊಬ್ಬು ಅಂದ್ರೆ” ಯಾರು ಪ್ರೊಡ್ಯುಸ್ ಮಾಡಿದ್ದು, ಯಾರು ಡೈರೆಕ್ಟರು, ಅವರ ಫರ್ಸ್ಟ್ ನೇಮ್ ಏನು?”ಲಾಸ್ಟ್ ನೇಮ್” ಏನು ಒಂದೂ ನೋಡಲ್ಲ. ನಮಗನ್ನಿಸಿದ್ದನ್ನು  ಬರೆದು ರಿವ್ಯೂ ಹಾಕ್ತೀವಿ.

[post_gallery]

Best comment will get a FREE movie ticket.

Leave a Reply

Your email address will not be published.


*