Rowdy Baby (U/A) – Kannada Romantic Drama Film- Rating 2.5*

Rowdy Baby (U/A) – Kannada Romantic Drama Film – Duration -2h 2m
Director : Epuru Krishna
Starring : SS Ravi Gowda, Divya Suresh, Heer Kaur, Amith V, Kempegowda, Aruna Balraju, Srinath Vasista, Avinash.
Singer : Kala Bhairava, Chandan Shetty, Apoorva Sridhar, Manasa Holla, Saketh, Harini Ivathuru
Music : Araman Merugu,
Producer : Warfoot Studios & Sumukha Entertainers
DOP : S Samrat
OB Scrore : Abhishek Rufus
Designer : Guru Yallapur ( Kesari Design )
PRO : Sudeendra Venkatesh
Direction Dept : Chandru Chanakya, Harish Kumar, Punith Shetty, Darshan Randy
Executive Producers : Ahmed Basha Shaik,CH Bhagya Lakshmi
Cgi & Vfx : Mahesh Kumar Budigi
Music On : A2 Music

ತೆರೆಗೆ ಬರಲು ಸಜ್ಜಾದ ಖ್ಯಾತ ನಿರ್ದೇಶಕ ಈಪುರು ಕೃಷ್ಣ ಅವರ ಕನಸಿನ ಚಿತ್ರ..! ರೌಡಿ ಬೇಬಿ..;

ಸ್ಯಾಂಡಲ್ವುಡ್ ನಲ್ಲಿ ಕಳೆದ ಕೊರೊನ ಸಂದರ್ಭದಲ್ಲಿ ಹೆಚ್ಚು ಹೊಸಬರ ಚಿತ್ರಗಳು ಸಿನಿಪ್ರಿಯರನ್ನು ಚಿತ್ರಮಂದಿರದ ಕಡೆ ಕೈ ಮಾಡಿ ಕರೆಯುತ್ತಿವೆ. ಯಾರು ಊಹಿಸದ ರೀತಿ ಸಿನಿಮಾ ಕಥೆಗಳು ಎಲ್ಲರಿಗೂ ಇಷ್ಟ ಆಗುತ್ತಿವೆ. ವಿಭಿನ್ನವಾಗಿ ಕಥೆ ಹೆಣೆದುಕೊಂಡು ಸಿನಿಪ್ರಿಯರಿಗೆ ಹೊಸಬರ ಚಿತ್ರ ತಂಡಗಳು ಒಂದೊಳ್ಳೆ ರಸದೌತಣ ನೀಡುತ್ತಿವೆ. ಹೌದು ಇದೀಗ ಖ್ಯಾತ ನಿರ್ದೇಶಕ ಈಪುರು ಕೃಷ್ಣ ಅವರು ಅಂತಹದ್ದೇ ವಿಭಿನ್ನವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಈಪುರು ಕೃಷ್ಣ ಅವರು ಭಾರತೀಯ ಚಲನಚಿತ್ರ ನಿರ್ದೇಶಕರು, ಬರಹಗಾರರು ಮತ್ತು ನಿರ್ಮಾಪಕರು ಅವರು ಪ್ರಾಥಮಿಕವಾಗಿ ತೆಲುಗು ಮತ್ತು ಕನ್ನಡ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಈಪುರು ಕೃಷ್ಣ ಅವರು ಇಲ್ಲಿಯವರೆಗೆ ರೌಡಿ ಬೇಬಿ (ಕನ್ನಡ) ಮತ್ತು ಆರ್ಥಿಕ ಸಾಯಂ ಕವಲೇನು (ತೆಲುಗು) ಚಲನಚಿತ್ರಗಳನ್ನು ಬರೆದು ನಿರ್ದೇಶಿಸಿದ್ದಾರೆ. ಜೊತೆಗೆ ಕೃಷ್ಣ ಅವರು ಸಿನಿಮಾ ನಿರ್ಮಾಣದಲ್ಲಿಯೂ ಸಹ ತೊಡಗಿದ್ದಾರೆ. ವಾರ್‌ಫೂಟ್ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್, ಇವರ ಊರು ನೆಲ್ಲೂರು ಎನ್ನಲಾಗಿದೆ. ಹಾಗೆ ಇದೀಗ ರೌಡಿ ಬೇಬಿ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಕಾಣಿಸಿಕೊಂಡಿದ್ದ ನಟಿ ದಿವ್ಯ ಸುರೇಶ್ ಅವರು ಬಿಗ್ಬಾಸ್ ಮನೆಯಿಂದ ಬಂದ ಬಳಿಕ ಹೆಚ್ಚು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದರು. ಹಾಗೆ ಅಭಿಮಾನಿಗಳನ್ನು ರಂಜಿಸುತ್ತಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ನಟಿ ದಿವ್ಯ ಸುರೇಶ್ ಅವರು ಅಭಿನಯಿಸಿರುವ ಹೊಸ ಚಿತ್ರ ರೌಡಿ ಬೇಬಿ ತೆರೆಗೆ ಬರಲು ಸಜ್ಜಾಗಿದೆ. ಈ ರೌಡಿ ಬೇಬಿ ಚಿತ್ರವನ್ನು ವಾರ್ ಪುಟ್ ಸ್ಟುಡಿಯೋ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಹಾಗೆ ಈ ಚಿತ್ರಕ್ಕೆ ಈಪುರು ಕೃಷ್ಣ ಅವರು ನಿರ್ದೇಶನ ಮಾಡಿದ್ದಾರೆ. ಹೌದು ಪ್ರೇಮಿಗಳ ದಿನ ಇನ್ನೇನು ಹತ್ತಿರ ಬರುತ್ತಿದ್ದು ಫೆಬ್ರವರಿ 14 ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಪ್ರೇಮಿಗಳು ಗ್ರಾಂಡ್ ಆಗಿ ಆಚರಿಸಲಿದ್ದಾರೆ. ಈ ಪ್ರಯುಕ್ತ ಪ್ರೇಮಿಗಳಿಗಾಗಿಯೇ ಇದೆ ಫೆಬ್ರವರಿ 11 ನೇ ತಾರಿಕು ರೌಡಿ ಬೇಬಿ ಚಿತ್ರ ಥಿಯೇಟರ್ಗೆ ಭರ್ಜರಿ ಎಂಟ್ರಿ ಕೊಡಲಿದೆ. ನಟ ಎಸ್ ಎಸ್ ರವಿಗೌಡ ಅವರು ಇದೆ ಮೊಟ್ಟ ಮೊದಲ ಬಾರಿಗೆ ನಾಯಕರಾಗಿ ರೌಡಿ ಬೇಬಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಇವರಿಗೆ ಬಿಗ್ಬಾಸ್ ಖ್ಯಾತಿಯ ದಿವ್ಯ ಸುರೇಶ್ ಅವರು ನಾಯಕಿಯಾಗಿದ್ದಾರೆ.

ಹೌದು ಸಾಮ್ರಾಟ್ ಛಾಯಾಗ್ರಹಣ ನೀಡಿದ್ದು, ಅಭಿಷೇಕ್ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಹಾಗೆ ಅರ್ಮಾನ್ ಮೆರುಗು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೆಂಕಿ ಯುಡಿವಿ ಅವರು ರೌಡಿ ಬೇಬಿ ಚಿತ್ರಕ್ಕೆ ಸಂಕಲನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಎಸ್ ಎಸ್ ರವಿಗೌಡ ಅವರಿಗೆ ಮೊದಲ ಬಾರಿ ನಾಯಕಿಯಾಗಿ ಇಬ್ಬರು ನಟಿಯರು ಮಿಂಚುತ್ತಿದ್ದಾರೆ. ದಿವ್ಯಾ ಸುರೇಶ್ ಹಾಗೂ ಹೀರಾ ಕೌರ್ ಅವರು ನಟಿಸಿದ್ದಾರೆ. ಹೌದು ಚಿತ್ರದಲ್ಲಿ ಅಮಿತ್, ಕೆಂಪೇಗೌಡ ಹಾಗೇನೇ ಇನ್ನೂ ದೊಡ್ಡ ತಾರಾಬಳಗವಿದೆ. ಇದೊಂದು ಸಕತ್ ಲವ್ ಸ್ಟೋರಿ ಸಿನಿಮಾ ಆಗಿದ್ದು, ಹೊಸಬರ ತಂಡ ವಿಭಿನ್ನವಾದ ಕಥೆಯ ಹೆಣೆದು, ಎಲ್ಲಾ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಹೆಚ್ಚು ತುಡಿತದಲ್ಲಿದೆ. ರೌಡಿ ಬೇಬಿ ಇಷ್ಟರಲ್ಲೇ ತೆರೆಗೆ ಅಪ್ಪಳಸಲಿದ್ದು ಯಶಸ್ವಿಯಾಗಲಿ ಎಂದು ನೀವು ಹಾರೈಸಿ ಹಾಗೆ ಶತದಿನ ಪೂರೈಸಲಿ ಎಂದು ಹೊಸಬರ ತಂಡಕ್ಕೆ ಶುಭಕೋರಿ…

Rating: 5* – Out Standing, 4.5* Very Very Good, 4* Very Good, 3.5* Good, 3* Above Average , 2.5* Average, 2* Below average, 1* Poor.

Best comment will get a FREE movie ticket.

Leave a Reply

Your email address will not be published.


*