“ಶೆಹನಾಯ್ ಮೊಳಗುವಾಗ..” ಎನ್ನುವ ಮಲಯಾಳಂನಿAದ ಅನುವಾದಗೊಂಡ ಕನ್ನಡ ಕಾದಂಬರಿಯ ಬಿಡುಗಡೆ, ಇದೇ ಡಿಸೆಂಬರ್ ೨೧ಕ್ಕೆ
ಮೂಲ ಮಲಯಾಳಂನಲ್ಲಿ ಶೆಯನಯ್ ಮುಳು಼ಂಙÄAಬೋಳ್ ಎಂಬ ಕಾದಂಬರಿಯನ್ನು ಪ್ರೇಮರಾಜ್ ಕೆಕೆ ರವರು ರಚಿಸಿದ್ದು ಇದರ ಕನ್ನಡ ಅನುವಾದವನ್ನು ಇದೀಗ “ಶೆಹನಾಯ್ ಮೊಳಗುವಾಗ” ಎಂಬ ಶೀರ್ಷಿಕೆಯೊಂದಿಗೆ ಪ್ರಕಾಶನಗೊಳ್ಳುತ್ತಿದೆ. ಮಲಯಾಳಂನ ಯುವ ಪ್ರತಿಭಾವಂತ ಲೇಖಕರಾದ ಪ್ರೇಮರಾಜ್ ಕೆಕೆ ರವರು, ಈಗಾಗಲೇ ಸಣ್ಣ ಕಥಾಸಂಕಲನಗಳು ಮತ್ತು ಕಾದಂಬರಿಗಳು ಮುಂತಾದ ಹತ್ತು ಕೃತಿಗಳನ್ನು ರಚಿಸಿ ಸ್ವಯಂ ಪ್ರಕಟಿಸಿರುತ್ತಾರೆ. ಅವರ ಕೃತಿಯೊಂದ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಗೊಂಡು ಇದೀಗ ಪ್ರಕಾಶನಗೊಳ್ಳುತ್ತಿದೆ.
ಮೂಲ ಮಲಯಾಳಂ ಕೃತಿಯನ್ನು ಶಿವಮೊಗ್ಗದ ಕೆ.ಪ್ರಭಾಕರನ್ ಅನುವಾದಿಸಿರುತ್ತಾರೆ. ಕೆ. ಪ್ರಭಾಕರನ್ ಈಗಾಗಲೇ ಮಲಯಾಳಂನಿAದ ಕನ್ನಡಕ್ಕೆ ಅನೇಕ ಕಥೆಗಳು, ಕಾದಂಬರಿಗಳು ವೈಚಾರಿಕ ಲೇಖನಗಳನ್ನು ಅನುವಾದಿಸಿರುತ್ತಾರೆ. ಕೆಪಿಟಿಸಿಎಲ್ನಿಂದ ನಿವೃತ್ತರಾದ ನಂತರ ಕೆ ಪ್ರಭಾಕರನ್ ಪೂರ್ಣಾವಧಿ ಅನುವಾದ ಸಾಹಿತ್ಯದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಳೆದ ೨೨ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ ಮೂಲದ ಪ್ರೇಮರಾಜ್ ಕೆ.ಕೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಲೇ ಸಾಹಿತ್ಯ ಚಟುವಟಿಕೆಯತ್ತ ಮುಖ ಮಾಡಿದವರು.
೪) ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು ತಮ್ಮ ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ ಅವರ ಕಾದಂಬರಿ “ಶೆಹನಾಯ್ ಮುಳ಼ಂಙÄAಬೋಳ್..” ಅನ್ನು ಕನ್ನಡಕ್ಕೆ ಅನುವಾದಿಸಲು ಬಯಸಿದ್ದರು. ಆ ನಂತರ ಕೆ.ಪ್ರಭಾಕರನ್ ಅವರೊಂದಿಗೆ ಚರ್ಚಿಸಿ ಪ್ರೇಮ್ರಾಜ್ ತಮ್ಮ ಕನಸನ್ನು ನನಸು ಮಾಡಿಕೊಂಡರು. ಈ ಕಾದಂಬರಿಯನ್ನು ಮೊದಲು ಮಲಯಾಳಂನಲ್ಲಿ ಬರೆಯಲಾಗಿದ್ದರೂ ಅದರ ಇಂಗ್ಲಿಷ್ ಆವೃತ್ತಿಯನ್ನು ಪ್ರೇಮ್ರಾಜ್ರವರೇ ಅನುವಾದಿಸಿ ಪ್ರಕಟಿಸಿದ್ದಾರೆ.
ಕೆ.ಪ್ರಭಾಕರನ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸುವಾಗ, ಮೂಲ ಮಲಯಾಳಂ ಭಾಷಾ ಸೌಂದರ್ಯವನ್ನು ಕಳೆದುಕೊಳ್ಳದೆಯೇ ಅದನ್ನೊಂದು ಕನ್ನಡ ಕಾದಂಬರಿಯನ್ನಾಗಿಸಿರುವುದು ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯಾಗಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್, ಅಮೇರಿಕಾ ಬುಕ್, ಹಾರ್ವರ್ಡ್ ಬುಕ್ ಮತ್ತು ಯೂನಿವರ್ಸಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಗಳಿಸಿಕೊಂಡಿರುವ ಪ್ರೇಮರಾಜ್ ಕೆ.ಕೆ ರವರು, ಈ ಪುಸ್ತಕಕ್ಕಾಗಿ ರವೀಂದ್ರನಾಥ ಟ್ಯಾಗೋರ್ ಸಾಹಿತ್ಯ ಪ್ರಶಸ್ತಿಯನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ.
ಇದೇ ತಿಂಗಳ ಡಿಸೆಂಬರ್ ೨೧ ರಂದು ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು ಅದಕ್ಕೆ, ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ನಾಡಿನ ಖ್ಯಾತ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಕನ್ನಡ ಕಾದಂಬರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
Leave a Reply