ದಸರಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕ್ರಿಯೇಟಿವ್ ತಂಡ .
“ಸರ್ಪ್ರೈಸ್” ಅನ್ನೋ ವಿಭಿನ್ನ ರೀತಿಯ ಟೈಟಲ್ ಒಂದಿಗೆ ಮ್ಯಜಿಕಲ್ ರಿಯಲಿಸಂ ಕಥೆ ಹೇಳಲು ಹೊರಟಿದೆ ಚಿತ್ರ ತಂಡ .
‘ ಸರ್ಪ್ರೈಸ್ ‘ ಶೀರ್ಷಿಕೆ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿರುತ್ತದೆ . ಇದರ ಆಕ್ಷನ್ – ಕಟ್ ಹೇಳುತ್ತಿರುವವರು ಕುಮಾರ್ S .V . ಇದು ಇವರ ಚೊಚ್ಚಲ ಚಿತ್ರ .ಇದಕ್ಕೂ ಮುಂಚೆ ‘ಪವರ್ ಸ್ಟಾರ್ ಪುನೀತ್ ರಾಜಕುಮಾರ್ ‘ ಮತ್ತು ‘ ರೊರಿಂಗ್ ಸ್ಟಾರ್ ಶ್ರೀ ಮುರುಳಿ ‘ ಮತ್ತು ಕನ್ನಡದ ಸ್ಟಾರ್ ನಟರ ಚಿತ್ರ ಗಳಿಗೆ ಮೋಷನ್ ಪೋಸ್ಟರ್ , lyrical video , ಹಾಗು ಸಂಕಲನಕಾರರಾಗಿ ಕೆಲಸ ಮಾಡಿ ಮೆಚ್ಚುಗೆ ಪಡೆದಿದ್ದಾರೆ .
ಈ ತಂಡದ ಯುವ ಪ್ರತಿಭೆ ಕುಮಾರ . ಕಥೆ , ಚಿತ್ರಕತೆ ಬರೆದು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ . ತಾರಕ್ ನಾಯಕ ನಟನಾಗಿ ನಟಿಸುತಿದ್ದು . ನಾನೊಂತರ ಚಿತ್ರದ ನಂತರ ‘ ಸರ್ಪ್ರೈಸ್ ‘ ಚಿತ್ರಕ್ಕೆ ನಾಯಕ ನಟರಾಗಿ ಬಣ್ಣ ಹಚ್ಚುತ್ತಿದ್ದಾರೆ .
ಮನೋಜಿ ರೂಢಿಯ ಛಾಯಾಗ್ರಹಣ , ಆಕಾಶ್ ರವರ ಸಂಕಲನ ಮತ್ತು ಪ್ರದ್ಯೋತ್ತಮ್ ಸಂಗೀತ ಈ ಚಿತ್ರಕ್ಕಿದೆ .
ಲಿಂಗರಾಜು ವಾಡಕಿ ಇವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ .. ಅತಿ ಶೀಘ್ರದಲ್ಲೇ ಚಿತ್ರ ತಂಡ ಚಿತ್ರಕರಣ ಮಾಡಲು ತಯಾರಿ ನಡೆಸುತ್ತಿದೆ .
Leave a Reply