Nawab – Kannada Romantic Film – Motion Poster Shoot

“Nawab” – Upcoming Kannada Triangular Romantic Movie is Produced by Bidarakote and Directed by Nakshatra Anand. Mahadeva (Chikka Vedi) and is assisted by Sharavana.
Banner : Paxala BN through Nutan Production House.
This is 15th film to be shot in Karthik Venkatesh’s studio after the lockdown, with Karthik Venkatesh Studio taking full charge of the post production work of the film.
Saath has teamed up with Karthik Venkatesh team, including editing, dubbing, re-recording camera unit, film lyrics and music.
Starring : Vivek ,Anneesh, Monisha.N. Raj

ತ್ರಿಕೋನ ಪ್ರೇಮಕತೆಯಲ್ಲಿ “ನವಾಬ”

ತ್ರಿಕೋನ ಪ್ರೇಮಕತೆಯಲ್ಲಿ “ನವಾಬ”

ಯುವ ಪಡೆಗಳೆಲ್ಲಾ ಸೇರಿಕೊಂಡು ನಿರ್ಮಿಸುತ್ತಿರುವ “ನವಾಬ” ಚಿತ್ರತಂಡ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನೂತನ್ ಪ್ರೊಡಕ್ಷನ್ ಹೌಸ್ ಮೂಲಕ ಪಾಲಕ್ಷ ಬಿ.ಎನ್. ಬಿದರಕೋಟೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸುಚಿತ್ಎಸ್ .ಕೆ. ಸಹ ನಿರ್ಮಾಪಕರಾಗಿದ್ದಾರೆ. ಈ “ನವಾಬ” ಚಿತ್ರವನ್ನು ನಕ್ಷತ್ರ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. ಮಹಾದೇವ (ಚಿಕ್ಕಾ ಬಳ್ಳಿ) ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಶರವಣ ಸಹಾಯಕ ನಿರ್ದೇಶನ ಮಾಡಿದ್ದಾರೆ. ಇದೊಂದು ಮುಗ್ಧ ಪ್ರೇಮಿಯ ಕಥೆಯಾಗಿದ್ದು , ತ್ರಿಕೋನ ಪ್ರೇಮ ಕಥೆಯನ್ನು ಒಳಗೊಂಡಿದೆ. ನಾವು ಇಷ್ಟಪಡುವವರಿಗಿಂತ , ನಮ್ಮನ್ನು ಇಷ್ಟಪಡುವವರ ಪ್ರೀತಿ ಎಂಥದ್ದು ಎಂದು ಹೇಳುವ ಅಂಶವೂ ಈ ಚಿತ್ರದಲ್ಲಿ ಒಳಗೊಂಡಿದ್ದು , ಪ್ರೀತಿ ಹಾಗೂ ಸ್ಫೂರ್ತಿಯ ಪ್ರೇಮ ಪ್ರಕರಣ ಪ್ರಮುಖವಾಗಿ ಕಾಣುತ್ತದೆ. ನಾಯಕನ ಜೀವನ ಹೇಗೆಲ್ಲಾ ತಿರುವುಗಳನ್ನು ಪಡೆದುಕೊಂಡು ಯಾವ ಹಂತಕ್ಕೆ ನಿಲ್ಲುತ್ತಾನೆ ಎಂಬ ಕಥಾ ಸಾರಾಂಶ ಈ ಚಿತ್ರದಲ್ಲಿದೆ. ಇದೊಂದು ರೊಮ್ಯಾಂಟಿಕ್ ಪ್ರೇಮ ಕಥೆಯಾಗಿದ್ದು , ಲಾಕ್ ಡೌನ್ ನಂತರ ಕಾರ್ತಿಕ್ ವೆಂಕಟೇಶ್ ಅವರ ಸ್ಟುಡಿಯೊದಲ್ಲಿ ಕೆಲಸ ನಡೆಯುತ್ತಿರುವ 15ನೇ ಚಿತ್ರ ಇದಾಗಿದ್ದು , ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಂಪೂರ್ಣ ಜವಾಬ್ದಾರಿಯನ್ನು ಕಾರ್ತಿಕ್ ವೆಂಕಟೇಶ್ ಸ್ಟುಡಿಯೋ ವಹಿಸಿಕೊಂಡಿದೆ. ಎಡಿಟಿಂಗ್ , ಡಬ್ಬಿಂಗ್ , ರೀ -ರೆಕಾರ್ಡಿಂಗ್ ಕ್ಯಾಮೆರಾ ಯೂನಿಟ್ , ಚಿತ್ರದ ಸಾಹಿತ್ಯ ಹಾಗೂ ಸಂಗೀತ ಒಳಗೊಂಡಂತೆ ಕಾರ್ತಿಕ್ ವೆಂಕಟೇಶ್ ತಂಡದೊಂದಿಗೆ ಸಾಥ್ ನೀಡಿದ್ದಾರೆ. ಪ್ರಥಮ ಬಾರಿಗೆ ಬೆಳ್ಳಿ ಪರದೆ ಮೇಲೆ ನಾಯಕನಾಗಿ ವಿವೇಕ್ ಪಾದಾರ್ಪಣೆ ಮಾಡುತ್ತಿದ್ದಾರೆ. ಇವರೊಂದಿಗೆ ಅಣ್ಣೇಶ್ , ಮೊನೀಶಾ.ಎನ್. ರಾಜ್ , ಕಾವ್ಯ , ಪವಿತ್ರ ನೀಲಕಂಠ ಸೇರಿದಂತೆ ಹಲವಾರು ಯುವ ಹಾಗೂ ಅನುಭವಿ ಕಲಾವಿದರು “ನವಾಬ” ಚಿತ್ರದಲ್ಲಿ ನಡೆಸುತ್ತಿದ್ದಾರೆ. ಪ್ರೀತಿಯ ಸುತ್ತ ಹಲವಾರು ಚಿತ್ರಗಳು ಬಂದು ಹೋಗಿದ್ದು , ಈ “ನವಾಬ” ವಿಭಿನ್ನವಾಗಿ ಮೂಡಿ ಬರಲಿದೆ ಎನ್ನುತ್ತಿದೆ ಚಿತ್ರ ತಂಡ. ಒಟ್ಟಾರೆ ಯುವ ಪಡೆಗಳ ಈ ಪ್ರಯತ್ನ ಯಶಸ್ಸಿನತ್ತ ಸಾಗಲಿ.

Best comment will get a FREE movie ticket.

Leave a Reply

Your email address will not be published.


*