ಪುಟ್ಟಣ್ಣ ಕಣಗಾಲ್ ಅವರ ಮನೆಗೆ ಭೇಟಿ ನೀಡಿದ ನಟ – ನಿರ್ದೇಶಕ ನವಿಲುಗರಿ ನವೀನ್ ಪಿ ಬಿ
ಇತ್ತೀಚಿಗೆ ಬಿಡುಗಡೆಗೊಂಡು ಒಂದು ತಿಂಗಳಿನ ಯಶಸ್ವಿ ಸಂಭ್ರಮಾಚರಣೆ ಮಾಡಿಕೊಂಡ ಸಿನಿಮಾ ಲೆಜೆಂಡ್ ಡೈರೆಕ್ಟರ್. ಈ ಚಿತ್ರದ ಮುಹೂರ್ತ ದಿನದಿಂದಲೇ ಬಹಳಷ್ಟು ಸುದ್ದಿಯಾಗಿತ್ತು ಲೆಜೆಂಡ್ ಡೈರೆಕ್ಟರ್ ಸಿನಿಮಾವು ಹೆಸರಾಂತ ಹಿರಿಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ಜೀವನ ಚರಿತ್ರೆ ಸಿನಿಮಾವಾಗಿದೆ ಎಂದು ಸುದ್ದಿ ಹಬ್ಬಿಸಿದರು ಅದರ ಜೊತೆಗೆ ಪುಟ್ಟಣ್ಣ ಕಣಗಾಲ್ ಅವರ ತಮ್ಮ ರಮಣ ಕಣಗಾಲ್ ಅವರು ಕೂಡ ನಟನೆ ಮಾಡಿದ್ದರಿಂದ ಇನ್ನೂ ಬಹಳ ಕುತೂಹಲ ಮೂಡಿಸಿತ್ತು. ಆದ್ರೆ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ಹೇಳಿದ ಕಥೆಯೇ ಬೇರೆಯಾಗಿತ್ತು ಸಾಧಾರಣ ಕಥೆ ಸಹಜ ನಟನೆಯಿಂದ ಜನ ಮನ ಗೆದ್ದ ಚಿತ್ರವಾಯಿತು. ಈ ಚಿತ್ರ ಗೆದ್ದ ಬೆನ್ನಲ್ಲೇ ನೂತನ ಚಿತ್ರ ಜನರಿಂದ ನಾನು ಮೇಲೆ ಬಂದೆ ಎಂಬ ಸಿನಿಮಾವನ್ನು ಕೂಡ ಗೋಷಣೆ ಮಾಡಿದ್ದಾರೆ ಇದೆಲ್ಲೇ ನಡೆಯುತ್ತಿರವ ಹಿನ್ನೆಲೆಯಲ್ಲೇ ನಟ ನಿರ್ದೇಶಕ ನವಿಲುಗರಿ ನವೀನ್ ಪಿ ಬಿ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಮನೆಗೆ ಭೇಟಿ ನೀಡಿ ಅವರ ಧರ್ಮ ಪತ್ನಿ ಅವರೊಂದಿಗೆ ಕುಶಲೋಪರಿ ವಿಚಾರಿಸಿ ಹಿರಿಯರಿಗೆ ಗೌರವವನ್ನು ಸಲ್ಲಿಸಿ ಆಶೀರ್ವಾದ ಪಡೆದರು.
Leave a Reply