Beladacchu – Multi-lingual Romantic Movie – Poster Release

Beladacchu – Multi-lingual Romantic Movie – Poster Release
Beladacchu is a multi language film in Kannada, Malayalam, Telugu & Tamil
ಬೆಲ್ದಚ್ಚು ಚಿತ್ರತಂಡದ ಕನಸನ್ನು ನನಸು ಮಾಡಿದ ಕನಸುಗಾರ ; ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್

ರಾಗಿ ಮುದ್ದೆ ಸಿನಿ ಕಂಬೈನ್ಸ್ ಬ್ಯಾನರ್ ನಡಿಯಲ್ಲಿ ಸಿದ್ದವಗು ತಿರುವ ಚಿತ್ರವಿದು . ಈ ಸಿನಿಮಾ ಟೈಟಲ್ ಬಿಡುಗಡೆ ಮಾಡುವ ಮುನ್ನವೇ ಭಾರಿ ಸುದ್ದಿ ಮಾಡಿದ ಚಿತ್ರವಿದು. ಸಿನಿಮಾದ ಟೈಟಲ್ ಅನ್ನು ಹೆಸರಾಂತ ನಿರ್ಮಾಪಕರು ಹಾಗು ನಟರಾದ ರಾಕ್ ಲೈನ್ ವೆಂಕಟೇಶ್ ರವರು ಡಾ. ಅಂಬರೀಶ್ ರವರ ಸ್ಮಾರಕದ ಬಳಿ ಬಿಡುಗಡೆ ಮಾಡಿದರು. ಆದರೆ ಈಗ ಸಿನಿಮಾದ ನಾಯಕ ನಟನ ಮೊದಲ ಲುಕ್ ಪೋಸ್ಟರ್ ಅನ್ನು ಸಿನಿಮಾ ರಂಗದಲ್ಲೇ ಲಕ್ಕಿಮ್ಯಾನ್ ಎಂದು ಕರೆಯಲ್ಪಡುವ “ಕ್ರೇಜಿಸ್ಟಾರ್ ಡಾ. ವಿ. ರವಿಚಂದ್ರನ್” ರವರ ಕೈಯಲ್ಲಿ ಬಿಡುಗಡೆ ಮಾಡಿಸ ಬೇಕೆಂಬ ಕನಸನ್ನು ಕಂಡಿದ್ದ ಚಿತ್ರ ತಂಡಕ್ಕೆ, ನಮ್ಮ ರವಿ ಮಾಮ ಸಾಥ್ ನೀಡಿ ಚಿತ್ರ ತಂಡದ ಕನಸನ್ನು ನನಸು ಮಾಡುವಲ್ಲಿ ಯಶಸ್ವಿಯಾಗಿಸಿದ್ದಾರೆ, ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಮೂಡಿಬರಲಿದೆ, ಎಲ್ಲಾ ಭಾಷೆಯ ಚಿತ್ರರಂಗ ಕಲಾವಿದರು ಬೆಲ್ದಚ್ಚು ಚಿತ್ರದ ಫಸ್ಟ್ ಲುಕ್ ನ್ನು ನೋಡಿ ಶುಭಾಶಯಗಳನ್ನು ಕೋರಿದ್ದಾರೆ ಎಂದು ಸಿನಿಮಾದ ನಿರ್ದೇಶಕರಾದ ಹೆಚ್ ಎನ್ . ಸ್ವಾಮಿ ರವರು ತಿಳಿಸಿದರು. ನಿರ್ದೇಶಕರಾಗಿದ್ದ ನವಿಲುಗರಿ ನವೀನ್ ಪಿ ಬಿ ಯವರು ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಿ ಅದೃಷ್ಟ ಪರೀಕ್ಷೆ ಮಾಡಲು ಸಜ್ಜಾಗಿದ್ದಾರೆ. ಸಂಗೀತವನ್ನು ಮನುರಾಜ್ ನೀಡುತಿದ್ದು, ಕ್ಯಾಮೆರಾ ಕೆಲಸ ಮಂಡ್ಯಗಿರೀಶ್ ಬಿ ರವರು ನಿರ್ವಹಿಸಿದರೆ ಸಂಕಲನವನ್ನು ಪ್ರೇಮ್ ರಾಜ್ ಕೆ ಕೆ ರವರು ಮಾಡುತಿದ್ದಾರೇ. ಸಹ ನಿರ್ಮಾಪಕರಾಗಿ ವಿನೋದ್ D V INFRASTRUCTURE mysore ರವರು ಸಾಥ್ ನೀಡುತಿದ್ದರೆ. ಅತೀ ಶ್ರೀಘ್ರದಲ್ಲೇ ಬೆಂಗಳೂರಿನಲ್ಲಿ ಇರುವ ಬಂಡೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ಜರುಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.

https://youtube.com/shorts/9TRWCDIdypk?feature=share

Best comment will get a FREE movie ticket.

Leave a Reply

Your email address will not be published.


*